canaratvnews

ಸೈಂಟ್ ಜೋಸೆಫ್‌ ವಿಶ್ವವಿದ್ಯಾಲಯ, ಬೆಂಗಳೂರು ಇದರ IT ಸಂಘಗಳ ಅಧಿಕಾರ ಸ್ವೀಕಾರ ಸಮಾರಂಭ

ಸೈಂಟ್ ಜೋಸೆಫ್‌ ವಿಶ್ವವಿದ್ಯಾಲಯ, ಬೆಂಗಳೂರು ಇದರ IT ಸಂಘಗಳ ಅಧಿಕಾರ ಸ್ವೀಕಾರ ಸಮಾರಂಭ 2025-26*
ಕಂಪ್ಯೂಟರ್ ಸೈನ್ಸ್ ವಿಭಾಗ, ಸೈಂಟ್ ಜೋಸೆಫ್‌ ವಿಶ್ವವಿದ್ಯಾಲಯವು, ತನ್ನ ಪ್ರತಿಷ್ಠಿತ ವಿದ್ಯಾರ್ಥಿ ಸಂಘಗಳಾದ ಸೈಬರ್ನೆಟಿಕ್ಸ್ ಅಸೋಸಿಯೇಷನ್ (ಯುಜಿ) ಮತ್ತು ಟೆಕ್ನೋಫೈಟ್ ಅಸೋಸಿಯೇಷನ್ (ಪಿಜಿ)ಗಳ ಉದ್ಘಾಟನೆ ಮತ್ತು ಅಧಿಕಾರ ಸ್ವೀಕಾರ ಸಮಾರಂಭವನ್ನು 9ನೇ ಜುಲೈ 2025ರಂದು, ಪಿಜಿ ಬ್ಲಾಕ್‌ನ ಕ್ಷೇವಿಯರ್ ಸಭಾಂಗಣದಲ್ಲಿ ನಡೆಸಿತು.

ವಂ। ಡೆನ್ಜಿಲ್ ಲೋಬೊ ಎಸ್.ಜೆ. ಅವರು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಮಾತನಾಡಿ, ಸೃಜನಶೀಲತೆ, ನಾವೀನ್ಯತೆ ಮತ್ತು ಸ್ವ-ಚಾಲಿತ ಕಲಿಕೆಯ ಮಹತ್ವವನ್ನು ತಿಳಿಸಿದರು.

ಬಳಿಕ ತುಷಾರ್ ತಿವಾರಿ ಅವರು ಮುಖ್ಯ ಅತಿಥಿ ಶ್ರೀ ರೋಜರ್ ಡಾಸ್ ಅವರನ್ನು ಪರಿಚಯಿಸಿದರು. ಅವರು ಉದ್ಯೋಗಾವಕಾಶಗಳ ಬದಲಾವಣೆಗಳು, AIಯ ದೈನಂದಿನ ಜೀವನದಲ್ಲಿ ಸಂಯೋಜನೆ ಮತ್ತು ಯುವ ವೃತ್ತಿಪರರಿಗೆ ಸೃಜನಶೀಲತೆ ಮತ್ತು ಹೊಂದಾಣಿಕೆಯ ಅಗತ್ಯದ ಬಗ್ಗೆ ಮಾತನಾಡಿದರು. ಈ AI-ಚಾಲಿತ ಯುಗದಲ್ಲಿ ಸೈಬರ್‌ ಸೆಕ್ಯೂರಿಟಿಯ ಹೆಚ್ಚುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರು

ಸಮಾರಂಭದಲ್ಲಿ ವಂ। ಡೆನ್ಜಿಲ್ ಲೋಬೋ ಎಸ್.ಜೆ., ಶಾಲಾ ನಿರ್ದೇಶಕ, ಸ್ಕೂಲ್ ಆಫ್ ಐಟಿ; ಡಾ. ಎ.ಎಂ. ಬೋಜಮ್ಮ, ಡೀನ್, ಸ್ಕೂಲ್ ಆಫ್ ಐಟಿ; ಡಾ. ಬಿ.ಜಿ. ಪ್ರಶಾಂತಿ, ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ವಿಭಾಗ; ಡಾ. ಬಿ. ನಿತ್ಯ, ಪಿಜಿ ಸಂಯೋಜಕರು; ಸರಣ್ಯ ಎಂ ಟೆಕ್ನೋಫೈಟ್ ಸಂಯೋಜಕರು, ಡಾ. ಅನ್ನಿ ಸಿರಿಯನ್, ಸೈಬರ್ನೆಟಿಕ್ಸ್ ಸಂಯೋಜಕರು ಮತ್ತು ಮುಖ್ಯ ಅತಿಥಿ ಶ್ರೀ ರೋಜರ್ ಡಾಸ್ (ಸೀನಿಯರ್ ಮ್ಯಾನೇಜರ್, ಡಯಾಜಿಯೋ) ಮುಂತಾದ ಗಣ್ಯರು ಭಾಗವಹಿಸಿದರು.

ವಂ। ಡೆನ್ಜಿಲ್ ಲೋಬೋ ಎಸ್.ಜೆ. ಮತ್ತು ಡಾ. ಎ.ಎಂ. ಬೋಜಮ್ಮ ಅವರು ಮುಖ್ಯ ಅತಿಥಿಗಳನ್ನು ಸನ್ಮಾನಿಸಿ, ವಿಭಾಗ ಮತ್ತು ವಿಶ್ವವಿದ್ಯಾಲಯದ ಪರವಾಗಿ ಕೃತಜ್ಞತಾ ಸ್ಮರಣಿಕೆಯನ್ನು ನೀಡಿದರು. ಡಾ. ಅನ್ನಿ ಸಿರಿಯನ್ ಮತ್ತು ಸರಣ್ಯ ಎಂ. ಅಧಿಕಾರ ಸ್ವೀಕಾರ ಸಮಾರಂಭವನ್ನು ನಡೆಸಿಕೊಟ್ಟರು. ಮೋನಿಷಾ ಎಸ್ ಅವರು ಎಲ್ಲರನ್ನು ಸ್ವಾಗತಿಸಿದರು ಡಿಸ್ನಿ ಇಗ್ನೇಷಿಯಸ್ ಎಸ್ ಅವರ ಧನ್ಯವಾದ ಸಮರ್ಪಿಸಿದರು

Share News
Exit mobile version