canaratvnews

*ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೃಹತ್ ಹೋರ್ಡಿಂಗ್ ಅನಾವರಣ*

ಮಂಗಳೂರು: ಮಹಿಳೆಯರ ಸಾಧನೆಗಳನ್ನು ಗೌರವಿಸುವ ಮತ್ತು ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ನಗರದ ಪಿವಿಎಸ್ ಸರ್ಕಲ್‌ನಲ್ಲಿ ಬೃಹತ್ ಹೋರ್ಡಿಂಗ್ ಅನ್ನು ಅನಾವರಣಗೊಳಿಸಲಾಯಿತು.

ಹೋರ್ಡಿಂಗ್ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಅವರು, “ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸಂಕಲ್ಪದಿಂದ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಕುಟುಂಬದಿಂದ ರಾಷ್ಟ್ರದವರೆಗೆ ಅವರ ಪಾತ್ರ ಅನನ್ಯ. ಮಹಿಳೆಯರ ಈ ಮಹತ್ವದ ಕೊಡುಗೆಯನ್ನು ಗೌರವಿಸಲು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ,” ಎಂದು ತಿಳಿಸಿದರು.
ದ್ವಿತೀಯ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ ಮಾತನಾಡಿ, “ಸಂಘಟನೆಯ ಯಶಸ್ಸಿನ ಹಿಂದೆ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ‘ರೆಡ್ ಕಾರ್ಪೆಟ್ ಲೇಡೀಸ್’ಗಳು ಮಹಿಳಾ ಸಂಘಟನೆಯ ಬಲಿಷ್ಠ ಕಂಬಗಳಾಗಿದ್ದಾರೆ. ಅವರ ಶಿಸ್ತು ಮತ್ತು ನಾಯಕತ್ವವೇ ನಮ್ಮ ಸಂಘಟನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ,” ಎಂದು ಪ್ರಶಂಸಿಸಿದರು.
ಮಾಜಿ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ವೇದಿಕೆಯಲ್ಲಿ ಕ್ಯಾಬಿನೆಟ್ ಖಜಾಂಚಿ ಬಾಲಕೃಷ್ಣ ಹೆಗ್ಡೆ, ಗವರ್ನರ್ ಸಂಯೋಜಕಿ ಜ್ಯೋತಿ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್, ಸಹ ಸಂಯೋಜಕಿ ಸುಮಲತಾ ಸುವರ್ಣ, ರೀಜನ್ ಚೇರ್ ಪರ್ಸನ್ ಗಾಯತ್ರಿ ರಾವ್ ಉಪಸ್ಥಿತರಿದ್ದರು.
ಜಿಲ್ಲಾ ಚೇರ್ ಪರ್ಸನ್‌ಗಳಾದ ಸೌಜನ್ಯ ಹೆಗ್ಡೆ, ಕನಕವಲ್ಲಿ ಹೆಚ್. ಕೇದಿಗೆ, ಶಾಂತಾ ಆರ್.ಶೆಟ್ಟಿ ಹಾಗೂ ಹಲವಾರು ಸದಸ್ಯರು ಭಾಗವಹಿಸಿದ್ದರು. ಮುಖ್ಯ ಸಂಯೋಜಕಿ ವಾಣಿ ಆಳ್ವ ಸ್ವಾಗತಿಸಿ, ಸಹ ಸಂಯೋಜಕಿ ಆಶಾ ರಾವ್ ವಂದಿಸಿದರು.
Share News
Exit mobile version