ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದಾಗ ಸಿಕ್ಕಿದ ಲೋನ್ ಜಾಹೀರಾತಿನಲ್ಲಿ ಬಂದ ನಂಬರ್‌ಗೆ ಕರೆ ಮಾಡಿ ಹಂತ ಹಂತವಾಗಿ 1.26 ಲಕ್ಷ ರೂ. ಹಣ ಪಾವತಿಸಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿರುವ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣದ ವಿವರ
ಮಂಗಳೂರಿನ ನಿವಾಸಿಯೊಬ್ಬರು ರೀಲ್ಸ್ ನೋಡುತ್ತಿದ್ದಾಗ ಸಿಕ್ಕಿದ ಲೋನ್ ಜಾಹೀರಾತನ್ನು ಗಮನಿಸಿ. ಅದರಲ್ಲಿದ್ದ 7991897524 ಸಂಖ್ಯೆ ಯನ್ನು ಸಂಪರ್ಕಿಸಿ ಲೋನ್ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ವಾಟ್ಸ್ ಆ್ಯಪ್ ಮೂಲಕ ಆಧಾರ್, ಬ್ಯಾಂಕ್ ದಾಖಲೆ ಸಹಿತ ಫೋಟೋ ನೀಡಿದ್ದಾರೆ.
ಬಳಿಕ ವಂಚಕರು ಲೋನ್ ಚಾರ್ಜ್ ಪಾವತಿಸುವಂತೆ ಕ್ಯೂಆರ್ ಕೋಡ್ ಕಳುಹಿಸಿದ್ದು, ಪಿರ್ಯಾದುದಾರರು ಮೊದಲಿಗೆ 2,000 ರೂ. ಪಾವತಿಸಿದ್ದಾರೆ. ಬಳಿಕ ಹಂತ ಹಂತವಾಗಿ ಜೂ. 11ರಂದು 99,700 ಹಾಗೂ ಜೂ. 16 26,300 . ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಿದ್ದರು. ಜೂ. 17ರಂದು ವಂಚಕರು ಮತ್ತೊಮ್ಮೆ 34 ಸಾವಿರ ರೂ. ಪಾವತಿಸುವಂತೆ ತಿಳಿಸಿದಾಗ ಸೈಬರ್ ವಂಚನೆ ಎಂದು ತಿಳಿದು ದೂರುದಾರರು ಸೈಬರ್ ತುರ್ತು ಸಂಖ್ಯೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.