ಮಂಗಳೂರು. ಡಿ.31: ಮಂಗಳೂರಿನ ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ನಲ್ಲಿರುವ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಜ. 14 ಹಾಗೂ 15 ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ.
ಜ. 14ರಂದು ಸಂಜೆ 6 ಗಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಉಶುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಜೆರಾಲ್ಡ್ ಐಸಾಕ್ ಲೋಬೊ ನಡೆಸಿಕೊಡಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂದನೀಯ ಡಾ। ಅಲೋಶಿಯಸ್ ಪಾವ್ಲ್ ಡಿಸೋಜಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದು ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ವಂ. ಸ್ಟೀಫನ್ ಪಿರೇರಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜ. 15ರಂದು ಬೆಳಿಗ್ಗೆ 10 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ನಡೆಯಲಿದ್ದು, ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ದುಮಿಂಗ್ ಡಾಯಸ್ ನಡೆಸಲಿದ್ದಾರೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರು ಅತಿ ವಂದನೀಯ ಮೊನ್ಸಿಂಞರ್ ಮ್ಯಾಕ್ಸಿಂ ನೊರೊನ್ಹಾ ನೆರವೇರಿಸುವರು.
ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 6.00 (ಕೊಂಕಣಿ), 8.00 (ಇಂಗ್ಲೀಶ್), 1.00 (ಕನ್ನಡ).
ವಾರ್ಷಿಕ ಹಬ್ಬದ ಎರಡನೆಯ ದಿನ: ಜನವರಿ 15 ರಂದು ಬೆಳಿಗ್ಗೆ 6.00, 8.00 ಘಂಟೆಗೆ ಕೊಂಕಣಿಯಲ್ಲಿ, 10.00 ಘಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.
ನವದಿನಗಳ ನವೇನಾ ಪ್ರಾರ್ಥನೆ:
ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯಲಿರುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯುವವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲ್ಲಿ, ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.45 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು.
ಧರ್ಮಾಧ್ಯಕ್ಷರ ಪೂಜಾವಿಧಿಗಳು: ಜನವರಿ 5 ಸೋಮವಾರದಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಇನ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು.
ಜನವರಿ 10, ಶನಿವಾರದಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೆನ್ರಿ ಡಿಸೋಜಾ, ಇವರು ನೆರವೇರಿಸಲಿರುವರು. ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು.
ವಂದನೀಯ ಫಾ| ಮೆಲ್ವಿನ್ ಡಿಕುನ್ಹಾ, ಗುರುಮಠದ ಮುಖ್ಯಸ್ಥರು, ಬಾಲಯೇಸುವಿನ ಪುಣ್ಯಕ್ಷೇತ್ರ
ವಂದನೀಯ ಫಾ| ಸ್ಟೀಫನ್ ಪಿರೇರಾ, ನಿರ್ದೇಶಕರು, ಬಾಲಯೇಸುವಿನ ಪುಣ್ಯಕ್ಷೇತ್ರ
ವಂದನೀಯ ಫಾ| ದೀಪ್ ಫೆರ್ನಾಂಡಿಸ್, ಕಾರ್ಮೆಲ್ ಸಭೆ
ಶ್ರೀ ವಲೇರಿಯನ್ ಫುರ್ಟಾಡೊ, ಬಾಳೊಕ್ ಜೆಜು ಕುಟಮ್
ಶ್ರೀ ವಿಲ್‌ಫ್ರೆಡ್ ಲಸ್ರಾದೊ, ವ್ಯವಸ್ಥಾಪಕರು, ಬಾಲಯೇಸುವಿನ ಪುಣ್ಯಕ್ಷೇತ್ರ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು