canaratvnews

ಇನ್ಮುಂದೆ 24 ಗಂಟೆ ಮೊದಲೇ ರೈಲ್ವೇ ಸೀಟ್‌ ಕನ್ಫರ್ಮ್‌: ಪ್ರಾಯೋಗಿಕವಾಗಿ ಜಾರಿ

ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ. ಕಾಯ್ದಿರಿಸಿದ  ಪ್ರಯಾಣಿಕರಿಗೆ ಇನ್ನು ಮುಂದೆ ತಮ್ಮ ಟಿಕೆಟ್ ಕನ್ಫರ್ಮ್‌ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಕೊನೆಯ ಕೆಲವು ಗಂಟೆಗಳವರೆಗೆ ಕಾಯುವ ಅಗತ್ಯವಿಲ್ಲ. ಭಾರತೀಯ ರೈಲ್ವೆಯು ವೇಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗಾಗಿ ಹೊಸ ನಿಯಮಗಳನ್ನು ತಂದಿದೆ. ಈಗ ಪ್ರಯಾಣಿಕರು ತಮ್ಮ ಸೀಟು ಕನ್ಫರ್ಮ್‌ ಆಗಿದೆಯೋ ಇಲ್ಲವೋ ಎಂಬುದನ್ನು ರೈಲು ಹೊರಡುವ ಒಂದು ದಿನ ಮೊದಲು ತಿಳಿದುಕೊಳ್ಳಬಹುದು.

ರೈಲ್ವೆ ಈಗ ರೈಲು ಹೊರಡುವ 24 ಗಂಟೆಗಳ ಮೊದಲು ಚಾರ್ಟ್ ತಯಾರಿಸಲು ಸಮಯವನ್ನು ನಿಗದಿಪಡಿಸಿದೆ. ಈ ಹಿಂದೆ, ನಿರ್ಗಮನಕ್ಕೆ ಕೇವಲ 4 ಗಂಟೆಗಳ ಮೊದಲು ಮೀಸಲಾತಿ ಚಾರ್ಟ್ ಅನ್ನು ಸಿದ್ಧಪಡಿಸಲಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ, ವೇಟಿಂಗ್‌ ಟಿಕೆಟ್‌ಗಳನ್ನು ಹೊಂದಿರುವವರು ಟಿಕೆಟ್‌ ಕನ್ಫರ್ಮ್‌ ಆಗಲು ಕೊನೆಯ ಕ್ಷಣದವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಯಾಣಿಕರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ ಈ ವ್ಯವಸ್ಥೆಯನ್ನು ರೈಲ್ವೆ ನೀತಿಯ ಭಾಗವಾಗಿಸಿ, ದೇಶದಾದ್ಯಂತ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.

ಸೀಟು ಕಾಯ್ದಿರಿಸಿ ಟಿಕೆಟ್‌ ಪಡೆದಿದ್ದರೂ, ಆಸನ ಹಂಚಿಕೆಯಾಗಿ, ಖಾತರಿಯಾಗದೇ ಇರುವುದರಿಂದ ತಮ್ಮ ಪ್ರಯಾಣದ ಬಗ್ಗೆ ಅನಿಶ್ಚಿತತೆ ಹೊಂದಿದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಇದರಿಂದ ಅವರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದ್ದಾರೆ.ಪ್ರಯಾಣದ ಟಿಕೆಟ್‌ ಖಚಿತಗೊಂಡ ನಂತರ ಪ್ರಯಾಣಿಕರು ಅದನ್ನು ರದ್ದುಗೊಳಿಸಿದರೆ, ಪಾವತಿಸಿದ ಮೊತ್ತದಲ್ಲಿ ಹೆಚ್ಚಿನ ಭಾಗವನ್ನು ಕಳೆದುಕೊಳ್ಳಲಿದ್ದಾರೆ.

ರದ್ದತಿ ನೀತಿಯ ಪ್ರಕಾರ ರೈಲು ಹೊರಡುವ 12ರಿಂದ 48 ಗಂಟೆಗೂ ಮುನ್ನ ಟಿಕೆಟ್‌ ರದ್ದುಗೊಳಿಸಿದರೆ ಶೇಕಡ 50ರಷ್ಟು ಹಣವನ್ನಷ್ಟೆ ಪ್ರಯಾಣಿಕರು ಪಡೆಯಲಿದ್ದಾರೆ. ನಾಲ್ಕರಿಂದ 12 ಗಂಟೆ ಮುಂಚೆ ರದ್ದುಗೊಳಿಸಿದರೆ ಶೇ 25ರಷ್ಟನ್ನು ಮಾತ್ರ ಪಡೆಯಲಿದ್ದಾರೆ.ರದ್ದತಿಯಿಂದ ಖಾಲಿಯಾಗುವ ಆಸನಗಳನ್ನು ಬುಕಿಂಗ್‌ ವ್ಯವಸ್ಥೆಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share News
Exit mobile version