canaratvnews

ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು   ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ನಿರ್ಮಿಸಿದ ನೂತನ ಮನೆ ಹಸ್ತಾಂತರ

ಮಂಗಳೂರು ; ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು ಇವರ ವತಿಯಿಂದ ಹಾಗೂ ದಾನಿಗಳ ಸಹಯೋಗದೊಂದಿಗೆ ಬಿಜೆಪಿ ಮಂಗಳೂರು ದಕ್ಷಿಣ ಉಪಾಧ್ಯಕ್ಷರಾದ ಶ್ರೀ ಕಿರಣ್ ರೈ ಬಜಾಲ್ ರವರ ನೇತೃತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಶ್ರೀ ಮತಿ ಯಮುನಾ ಪೂಜಾರಿ ಕುಟುಂಬಸ್ಥರೊಗೆ ನೂತನವಾಗಿ ನಿರ್ಮಿಸಿದ ಗೃಹ “ಹರಿ ಓಂ” ಹೆಸರಿನ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಳಿಕ ಮಾತನಾಡಿದ ಕಿರಣ್ ರೈ ಯವರು ಹರಿ ಓಂ ಸೇವಾ ಸಂಸ್ಥೆ ಬಡ ಕುಟುಂಬದ ಮನೆ ಯಾವ ಸಂಧರ್ಭದಲ್ಲಿ ಬಿಳುತ್ತಿರುವ ಪರಿಸ್ಥಿತಿಯಲ್ಲಿದ್ದ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತೆ ಸುಮಾತಿ ಎಂಬವರು ತಿಳಿಸಿದ್ದು ,ಮನೆಯ ಪರಿಸ್ಥಿತಿ ತೀವ್ರ ಹದಗೆಟ್ಡಿದ ಸಂದರ್ಭದಲ್ಲಿ ನಾವೆಲ್ಲಾ ಒಂದು ಗೂಡಿ ಮನೆ ನಿರ್ಮಾಣಕ್ಕೆ ಮುಂದುವರಿಸಿದೆವು ಕೊನೆಗೆ ಶಾಸಕರಾದ ವೇದವ್ಯಾಸ್ ಕಾಮತ್ ರವರ ಸಹಯೋಗದೊಂದಿಗೆ ಮನೆ ನಿರ್ಮಾಣಕ್ಕೆ ಎಲ್ಲಾ ದಾನಿಗಳು ಸಹಕರಿಸಿದ ಹಿನ್ನೆಲೆ ಕೇವಲ ೫ ತಿಂಗಳಲ್ಲಿ ಮನೆನಿರ್ಮಾಣಕ್ಕೆ ಸಹಕರಿಸಿದರು ಅದಲ್ಲದೇ ಎಲ್ಲಾ ದಾನಿಗಳು ಮನೆಗೆಬೇಕಾದ ಸಮಾಗ್ರಿಗಳು ಒದಗಿಬಂದವು ಎಂದು ತಿಳಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ರವರು ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ದ್ವೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಬಳಿಕ ಯಮುನ ಪೂಜಾರಿ ಕುಟುಂಬಕ್ಕೆ ಮನೆಯ ಕಿಲಿ ಕೈ ಹಸ್ತಾಂತರಿಸಿದ್ದು ಕುಟುಂಬದ ಜೀವನಕ್ಕಾಗಿ ಒಂದು ಲಕ್ಷ ರೂಮೌಲ್ಯದ ಚೆಕ್ಕ್ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಸ್ಥಾಪಿಸಿ ಹಿಂದೂ ಸಮಾಜ ಡಾ. ಕೇಸವ ಹೆಗಡವಾರ್ ರವರು ಸಂಘವನ್ನು ಕಟ್ಟಿದ್ದರು ಮರಳಿನ ರಾಶಿಯಿಂದ ಮರಳುತೆಗೆದರೆ ಮತ್ತೆ ನೀರು ಬಂದು ಮುಚ್ಚುತ್ತದೆ ಅದರಂತೆಯೆ ಹಿಂದೂ ಸಮಾಜಕ್ಕೆ ಕೊಡುಗೆ ನೀಡುವುದೆ ನಮ್ಮ ಧರ್ಮ. ಕಿರಣ್ ರೈ ನೇತೃತ್ವದಲ್ಲಿ ಒಂದು ಬಡಕುಟುಂಬಕ್ಕೆ ಕಿರಣ ನೀಡುವುದು ಸಾಧನೆ,ಒಟ್ಟು ೧೦ ಲಕ್ಷ ರೂಪಾಯಿ ಮನೆ ಕಟ್ಟಿ ಜೊತೆಗೆ ೧ ಲಕ್ಷ ರೂಪಾಯಿ ಠೇವಣಿ ನೀಡಿರುವುದು ಶ್ಲಾಘನೀಯ. ಅದು ನಮ್ಮ ಕರ್ತವ್ಯ, ಅದು ನಮ್ಮ ಧರ್ಮ,ನಮ್ಮ ಹಿಂದೂ ಸಮಾಜವನ್ನು ಉಳಿಸಿ ಪ್ರಪಂಚವನ್ನು ಉಳಿಸಿಬೇಳೆಸಬೇಕು.ನಾವು ಹಿಂದೂ ಸಮಾಜಕ್ಕೆ ಬದುಕುವವರು, ನಾವು ಯಾರಿಗೂ ಹೆದರರುವುದಿಲ್ಲವೆಂದರು.ನಾವು ನಮ್ಮ ದೇಶದ ಪ್ರಧಾನಿಗಳ ಕೈಜೊಡಿಸ ಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಶಾಸಕರಾದ ವೇದವ್ಯಾಸ್ ಕಾಮತ್ ರವರು ಈ ಒಂದು ಮನೆ ಕಟ್ಟಲು ಶ್ರಮ ವಹಿಸಿದ ಎಲ್ಲಾ ದಾನಿ ಹಾಗೂ ಹರಿ ಓಂ ಸೇವಾ ಸಂಸ್ಥೆ ಗೆ ಧನ್ಯವಾದ ಸಮರ್ಪಿಸಿದರು. ಕಷ್ಷದಲ್ಲಿರುವ ಹಿಂದೂ ಸಮಾಜಕ್ಕೆ ಕೈಜೊಡಿಸುವುದು ನಮ್ಮ ಕರ್ತವ್ಯ ಎಂಬುದು ಗುರುಗಳ ಮಾತು, ಕಷ್ಟ ದಲ್ಲಿರುವ ವ್ಯಕ್ತಿ ಗಳಿಗೆ ಸಹಾಯ ಹಸ್ತಾಂತರ ಮಾಡಿದರೆ ದೇವರು ಕೂಡ ಆಶಿರ್ವಾದ ನೀಡುತ್ತಾರೆ ಎಂದರು. ಬಳಿಕ ಬಡಕುಟುಂಬದ ಕಷ್ಟಕಾರ್ಯದ ಬಗ್ಗೆ ವಿವರಿಸಿದರು.ನಾವು ಸಂಪಾದನೆ ಮಾಡಿದರಲ್ಲಿ ಇಂತಿಷ್ಟು ಮಿಸಲಿಡುವುದು ನಮ್ಮ ಕರ್ತವ್ಯ ಎಂದರು.ಹಿಂದುಳಿದ ವರ್ಗಕ್ಕೆ ನೀಡುವ ಸೌಲಭ್ಯಗಳನ್ನು ಎಲ್ಲರೂ ಉಪಯೋಗಿಸಬೇಕು ವಂಚಿತರಾಗಬಾರದು ಸ್ಥಳೀಯ ಕಾರ್ಯಕರ್ತರು ಇಂತಹ ಹಿಂದುಳಿದ ವರ್ಗದ ಕುಟುಂಬವನ್ನು ಗುರುತಿಸಿ ಸರಕಾರದ ಸೌಲಭ್ಯಗಳನ್ನು ತಿಳಿಸಿ ಉಪಯೋಗಿಸುಂತೆ ತಿಳಿಸಿದರು.

ಬಳಿಕ ವೇದಿಕೆಯಲ್ಲಿ ಆರ್‌.ಜೆ ಅಭಿಶೇಕ್ ಶೆಟ್ಟಿಯವರಿಗೆ ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿದರು.ಉತ್ತಮ ಅಂಕ ಗಳಿಸಿದ ಯಮುನಾ ಪೂಜಾರಿಯ ಮೊಮ್ಮಕ್ಕಳು ಯಶ್ವಿತ ಹಾಗೂ ಕೀರ್ತಿ ರವರನ್ನು ಗೌರವಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲರವರು “ಹರಿ ಓಂ” ಸೇವಾ ಸಂಸ್ಥೆ ಯ ಕಾರ್ಯವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಸತೀಶ್ ಕುಂಪಾಲ,ರಮೇಶ್ ಕಂದೆಟ್ಟು ಭಾಸ್ಕರ ಚಂದ್ರ ಶೆಟ್ಟಿ ಯವರಿಗೆ ಯಶೋಧರ ಚೌಟ, ರಮೇಶ್,ಹರೀಶ್ ,ರಾಜೇಶ್ ಶೆಟ್ಟಿ,ರಾಮಚಂದ್ರ ಆಳ್ವ,ವೀಣಾ ಮಂಗಳ,ಚಂದ್ರಾವತಿ ವಿಶ್ವನಾಥ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.

Share News
Exit mobile version