• Home  
  • ವಿವಾದಾತ್ಮಕ ಭಾಷಣ: ಪೊಲೀಸ್‌ ವಿಚಾರಣೆಗೆ ಹೈಕೋರ್ಟ್ ತಡೆ
- DAKSHINA KANNADA - HOME - LATEST NEWS - STATE

ವಿವಾದಾತ್ಮಕ ಭಾಷಣ: ಪೊಲೀಸ್‌ ವಿಚಾರಣೆಗೆ ಹೈಕೋರ್ಟ್ ತಡೆ

ಬೆಂಗಳೂರು: ಚುನಾವಣೆ ವೇಳೆ ಮಾಡಿದ್ದ ವಿವಾದಾತ್ಮಕ ಭಾಷಣ ಸಂಬಂಧ ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ಬಂಟ್ವಾಳ ಠಾಣಾ ಪೊಲೀಸರು ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

2018ರ ವಿಧಾನಸಭಾ ಚುನಾವಣೆ ವೇಳೆ ಬಂಟ್ವಾಳದ ಕಲಡ್ಕದಲ್ಲಿ ರಾಜೇಶ್ ನಾಯ್ಕ್ ಪರ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುನಿಲ್ ಕುಮಾರ್, ‘ರಾಮ ಬೇಕೋ, ಅಲ್ಲಾ ಬೇಕೋ? ಎಂದು ಪ್ರಶ್ನೆ ಮಾಡಿದ್ದರು. ಈ ಕುರಿತು ಎಫ್‌ಐಆರ್ ದಾಖಲಾಗಿತ್ತು.

 

ಈ ಬಗ್ಗೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಇತ್ತೀಚೆಗೆ ಆರೋಪ ಪಟ್ಟಿ ದಾಖಲಿಸಿ ವಿಚಾರಣೆ ಪ್ರಾರಂಭಿಸಿದ್ದರು. ಇದಕ್ಕೆ ತಡೆ ನೀಡುವಂತೆ ಸುನಿಲ್ ಕುಮಾರ್ ಪರ ವಕೀಲ ಮಹೇಂದ್ರ ಹೈಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ನ್ಯಾಯಾಲಯ ತಡೆ ನೀಡಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678