ಈಜುಕೊಳದಲ್ಲಿ ಈಜುತ್ತಲೇ ಕೊಳಲು ನುಡಿಸುವ ಮೂಲಕ ಖ್ಯಾತ ಸಂಗೀತಗಾರ ಮತ್ತು ಬಹುವಾದ ವಾದಕ ರೂಬನ್ ಜೇಸನ್ ಮಚಾದೊ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.
ಮಂಗಳೂರಿನ ಸೈಂಟ್ ಅಲೋಶಿಯನ್ ವಿ.ವಿಯ ಈಜುಕೊಳದಲ್ಲಿ ಬುಧವಾರ ಅವರು ಕೊಳಲು ನುಡಿಸುತ್ತಾ ಬ್ಯಾಕ್ ಸ್ಟೋಕ್ ನಲ್ಲಿ 20 ನಿಮಿಷಗಳ ಕಾಲ, 700 ಮೀ.ಗೂ ಹೆಚ್ಚು ಈಜಿ ದಾಖಲೆ ಬರೆದರು. ಈಜುವುದೇ ಒಂದು ಕಲೆ. ಬ್ಯಾಕ್ ಸ್ಟೋಕ್ ಮತ್ತೊಂದು ಕಲೆ. ಇದರ ಜತೆಗೆ ಕೊಳಲು ನುಡಿಸುತ್ತ ನಿರಾಳವಾಗಿ ಈಜುವುದು ದೊಡ್ಡ ಸಾಧನೆ ಎಂದು ಪ್ರೇಕ್ಷಕರು ಬಣ್ಣಿಸಿದರು.
ಬಳಿಕ ನಡೆದ ಅಭಿನಂದನ ಕಾಠ್ಯಕ್ರಮದಲ್ಲಿ ಗೋಲ್ಡನ್ ಬಕ್ ಆಫ್ ವರ್ಲ್ಡ್ ರೆಕಾರ್ಡ್ ವಿಷ್ಯಾ ಹೆಡ್ ಮನೀಶ್ ವಿಷ್ಟೋಯಿ ಮಾತನಾಡಿ, ಈಜಿನೊಂದಿಗೆ ಕೊಳಲು ವಾದನ ಅಪೂರ್ವ ಸಂಗತಿಯಾಗಿದೆ. ಜಾಗತಿಕವಾಗಿ ಇದು ಅದ್ವಿತೀಯ ದಾಖಲೆ ಎಂದರು.ಸೈಂಟ್ ಅಲೋಶಿಯನ್ ಎ.ವಿ. ಉಪಕುಲಪತಿ ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ರಮೋನಾ ನೃತ್ಯ ದಾಖಲೆ ಸಹಿತ ಎರಡು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಗಳು ನಮ್ಮ ವಿವಿಯಿಂದ ಆಗಿದೆ. ಮತ್ತಷ್ಟು ಪ್ರತಿಭೆಗಳಿಗೆ ಸ್ಫೂರ್ತಿ ಎಂದು ಹೇಳಿದರು.
ದೇರೆಬೈಲ್ ಪ್ಯಾರಿನ್ ನ ವಂ। ಜೋಸೆಫ್ ಮಾರ್ಟಿಸ್, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ| ಆಲ್ವಿನ್ ಡೇನಾ, ರೂಬನ್ ಅವರ ತಂದೆ-ತಾಯಿ, ಪತ್ನಿ ಅನುಷಾ ಜೀನ್ ಡಿಸೋಜಾ, ಸೈಂಟ್ ಅಲೋಶಿಯಸ್ ಈಜುಕೊಳದ ಮ್ಯಾನೆಜುರ್‌ನವೀನ್ ಇದ್ದರು.





