• Home  
  • ದಾಖಲೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ದಿಢೀರ್‌ ಕುಸಿತ…! ಕಾರಣವೇನು?
- DAKSHINA KANNADA - HOME - LATEST NEWS - NATIONAL - STATE

ದಾಖಲೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ದಿಢೀರ್‌ ಕುಸಿತ…! ಕಾರಣವೇನು?

ನವದೆಹಲಿ: ಕಳೆದ ಕೆಲ ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಶುಕ್ರವಾರ ದಿಢೀರ್ ಕುಸಿತ ಕಂಡಿವೆ. ಮಲ್ಟಿ ಕಮೋಡಿಟಿ ಎಕ್ಸ್ ಚೆಂಜ್ (MCX)ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಶೇ.15 ರಷ್ಟು ಕುಸಿತ ಕಂಡಿದೆ. ಚಿನ್ನದ ಬೆಲೆ ಶೇ.6.5 ರಷ್ಟು ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ರೂ. 12,000 ಕಡಿಮೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ. 1,93,096 ಆಗಿತ್ತು. MCX ನಲ್ಲಿ ಚಿನ್ನದ ದರ ಈಗ […]

Share News

ನವದೆಹಲಿ: ಕಳೆದ ಕೆಲ ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಶುಕ್ರವಾರ ದಿಢೀರ್ ಕುಸಿತ ಕಂಡಿವೆ. ಮಲ್ಟಿ ಕಮೋಡಿಟಿ ಎಕ್ಸ್ ಚೆಂಜ್ (MCX)ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಶೇ.15 ರಷ್ಟು ಕುಸಿತ ಕಂಡಿದೆ.

ಚಿನ್ನದ ಬೆಲೆ ಶೇ.6.5 ರಷ್ಟು ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ರೂ. 12,000 ಕಡಿಮೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ. 1,93,096 ಆಗಿತ್ತು. MCX ನಲ್ಲಿ ಚಿನ್ನದ ದರ ಈಗ ಶೇ.1.88 ರಷ್ಟು ಕುಸಿದು, 10 ಗ್ರಾಂಗೆ 1,80,499 ರೂ. ಗಳಲ್ಲಿ ವಹಿವಾಟು ನಡೆಸಿದೆ.

ಜನವರಿ 30 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7500 ರೂ. ಇಳಿಕೆಯಾಗಿದ್ದು, ಈಗ 156,400 ರೂ.ಗೆ ತಲುಪಿದೆ.ಈ ಮಧ್ಯೆ 24 ಕ್ಯಾರೆಟ್ ಚಿನ್ನದ ಬೆಲೆ 8,230 ರೂ. ಇಳಿಕೆಯಾಗಿದ್ದು, ರೂ. 170,620 ರೂ.ಗೆ ತಲುಪಿದೆ. ಅದೇ ರೀತಿ

ಬೆಳ್ಳಿ ಬೆಲೆಗಳು ಪ್ರತಿ ಕೆಜಿಗೆ 15000 ರೂ.ಗಳಷ್ಟು ಕುಸಿದಿದ್ದು, ಈಗ ಅದು 395,000 ರೂ.ಗಳಷ್ಟಿದೆ. ಅದೇ ರೀತಿ, 100 ಗ್ರಾಂ ಬೆಳ್ಳಿಯ ಬೆಲೆ 39,500 ರೂ.ಗಳಷ್ಟಿದ್ದು, ಅದು 1500 ರೂ.ಗಳಷ್ಟು ಕುಸಿದಿದೆ.

ಚಿನ್ನ-ಬೆಳ್ಳಿಯ ಹಠಾತ್ ಕುಸಿತಕ್ಕೆ ಮುಖ್ಯ ಕಾರಣವೇನು?

ತಜ್ಞರ ಪ್ರಕಾರ ಚಿನ್ನ-ಬೆಳ್ಳಿಯ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡುತ್ತಿರುವುದು, ಅಮೆರಿಕದ ಡಾಲರ್ ಮೌಲ್ಯದಲ್ಲಿ ಜಿಗಿತ ಮತ್ತು ಷೇರು ಮಾರುಕಟ್ಟೆಗಳಲ್ಲಿ ಮಾರಾಟದಂತಹ ಬಹು ಅಂಶಗಳು ಕಾರಣವಾಗಿವೆ. ಈ ವ್ಯತ್ಯಾಸ ಇತರ ಸ್ವತ್ತುಗಳಿಗೂ ವಿಸ್ತರಿಸಿದೆ. ಜನವರಿ ತಿಂಗಳಲ್ಲಿ ಚಿನ್ನ ಸರಿಸುಮಾರು ಶೇ 25ರಷ್ಟು ಏರಿಕೆ ಕಂಡಿದ್ದು, ಬೆಳ್ಳಿ ಶೇ 60ರಷ್ಟು ಬೆಲೆಯೇರಿಕೆಯಲ್ಲಿ ವ್ಯವಹಾರ ನಡೆಸುತ್ತಿದೆ. ಇದಕ್ಕೆ ಮೊದಲು 2025ರಲ್ಲಿ ಚಿನ್ನ ಶೇ 65ರಷ್ಟು ಮತ್ತು ಬೆಳ್ಳಿ ಶೇ 148ರಷ್ಟು ಬೆಲೆಯಲ್ಲಿ ಏರಿಕೆ ಕಂಡಿತ್ತು. ಹೀಗಾಗಿ ಸಹಜವಾಗಿ ಹೂಡಿಕೆದಾರರು ಬೆಲೆ ತನ್ನ ಅತ್ಯುನ್ನತ ಸ್ಥಾನಕ್ಕೆ ವಿಸ್ತರಿಸಲ್ಪಟ್ಟಿದೆ ಮತ್ತು ಇನ್ನು ಏರುವ ಸಾಧ್ಯತೆಯಿಲ್ಲ ಎನ್ನುವ ಭಾವನೆಯಿಂದ ಮಾರಾಟಕ್ಕೆ ಇಳಿದಿದ್ದಾರೆ. ಹೂಡಿಕೆದಾರರು ಬೆಲೆಯ ಉನ್ನತ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

 

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೇನು?

ಮಂಗಳೂರಿನಲ್ಲಿ ಜನವರಿ 30ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ  ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,062 (- 823) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,640 (- 755) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,797 (- 617) ರೂ. ಬೆಲೆಗೆ ತಲುಪಿದೆ.

Share News