ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿ ಜಯರಾಮರವರು ಮರದ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದು, ಇವರ ಮಗ ಗೌತಮ್ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತೀರೋದು, ಗೌತಮ್ ಎಂದಿನಂತೆ ಶಾಲೆ ಮುಗಿಸಿ ಸಂಜೆ ಮನೆಯಲ್ಲಿ ಮನೆಯೊಳಗಿದ್ದ ಹಳೆ ಪಟಾಕಿ ಮತ್ತು ಕಸಗಳನ್ನು ಬಿಸಾಡುವಾಗ ಆಕಸ್ಮಿಕವಾಗಿ ಬೆಂಕಿ ತಗಳಿ ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು ಆಗಿದೆ. ಮಂಗಳೂರಿನ AJ ಹಾಸ್ಪಿಟಲ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. AJ ಆಸ್ಪತ್ರೆಯ ವೈದ್ಯರು ಈ ಹುಡುಗ ಮುಂಚಿನತರ ಓಡಾಡೋಕಾದ್ರೆ ಕೈ ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡ್ಲೆಬೇಕು ಅಂತ ಹೇಳಿರುತ್ತಾರೆ. ಆದರೆ ಚಿಕಿತ್ಸೆಗಾಗಿ ಸುಮಾರು 10ರಿಂದ 12ಲಕ್ಷ ಹಣ ಬೇಕಾಗುತ್ತೆ. ಆದರೆ ಮರದ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಜಯರಾಮ ರವರು ಇಷ್ಟೊಂದು ಹಣ ಹೊಂದಿಸಲು ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಮಗನ ಈ ಸ್ಥಿತಿ ಜಯರಾಮರವರಿಗೆ ಬರಸಿಡಿಲಿನಂತೆ ಎರಗಿದೆ. ಸಹೃದಯರಾದ ತಾವೆಲ್ಲ ತಮ್ಮಿಂದಾದ ಕಿಂಚಿತ್ತು ಸಹಾಯವನ್ನು ಈ ಕೆಳಗೆ ನೀಡಲಾದ ಬ್ಯಾಂಕ್ ಖಾತೆಗೆ ನೀಡಿದ್ದಲ್ಲಿ ಒಂದು ಬಡ ಕುಟುಂಬದ ಬದುಕಿನ ಭರವಸೆ ಬೆಳಗಲು ಕಾರಣವಾದೀತು.

ಮಾಸ್ಟರ್ ಗೌತಮ್ ಮುಂಚಿನ ತರಹನೇ ಬಹು ಬೇಗನೇ ಗುಣಮುಖನಾಗಿ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ.
Jayarama G, Gutthinabailu House
Manila, Bantwala Taluk
Ac No: 5022500100516401
IFSC code: 0000502
Phone: 9481606915


