• Home  
  • ಮಂಗಳೂರು: ಯುವತಿಯರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 6 ಪೆಡ್ಲರ್‌ಗಳ ಬಂಧನ
- DAKSHINA KANNADA - HOME - LATEST NEWS

ಮಂಗಳೂರು: ಯುವತಿಯರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 6 ಪೆಡ್ಲರ್‌ಗಳ ಬಂಧನ

ಮಂಗಳೂರು: ನಗರದ ಪಾಂಡೇಶ್ವರ ಮತ್ತು ಬಂದರ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಪ್ರಸಕ್ತ ಪಾಂಡೇಶ್ವರದಲ್ಲಿ ವಾಸವಾಗಿರುವ ಸಯ್ಯದ್ ಅಫ್ರಿದಿ (26) ಮತ್ತು ಅಹ್ಮದ್ ಅಲಿ ಅರ್ಷಾನ್ (22) ಹಾಗೂ ನಗರದ ಬಲ್ಮಠದ ಮಕ್ಸೂದ್ ಸಾಗ್ (23), ಕೇರಳದ ಕೊಟ್ಟಾಯಂನ ಫೆಲಿಕ್ಸ್ ಪಿ.ಜೊಸೆಫ್ (20)ರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ 53.87 ಗ್ರಾಂ ಎಂಡಿಎಂಎ, 103.02 ಗ್ರಾಂ ಹೈಡ್ರೋವಿಡ್ ಗಾಂಜ ಹಾಗೂ […]

Share News

ಮಂಗಳೂರು: ನಗರದ ಪಾಂಡೇಶ್ವರ ಮತ್ತು ಬಂದರ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಪ್ರಸಕ್ತ ಪಾಂಡೇಶ್ವರದಲ್ಲಿ ವಾಸವಾಗಿರುವ ಸಯ್ಯದ್ ಅಫ್ರಿದಿ (26) ಮತ್ತು ಅಹ್ಮದ್ ಅಲಿ ಅರ್ಷಾನ್ (22) ಹಾಗೂ ನಗರದ ಬಲ್ಮಠದ ಮಕ್ಸೂದ್ ಸಾಗ್ (23), ಕೇರಳದ ಕೊಟ್ಟಾಯಂನ ಫೆಲಿಕ್ಸ್ ಪಿ.ಜೊಸೆಫ್ (20)ರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ 53.87 ಗ್ರಾಂ ಎಂಡಿಎಂಎ, 103.02 ಗ್ರಾಂ ಹೈಡ್ರೋವಿಡ್ ಗಾಂಜ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಂಕನಾಡಿಯ ಎಡಲ್‌ರೋಜ್ (33) ಮತ್ತು ಕದ್ರಿ ಮಲ್ಲಿಕಟ್ಟೆಯ ಆರೋನ್ ವಿಶಾಲ್ ಲಾಸ್ರಾದೋ (18) ಎಂಬವರನ್ನು ಬಂಧಿಸಿರುವ ಬಂದರ್ ಪೊಲೀಸರು 60 ಗ್ರಾಂ ಹೈಡ್ರೋವಿಡ್ ಗಾಂಜ, 1.155 ಕೆಜಿ ಗಾಂಜ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಾ.4ರಂದು ಬಂದರ್ ಬದ್ರಿಯಾ ರಸ್ತೆಯ ಲಾಡ್ಜ್‌ವೊಂದರಲ್ಲಿ ಮತ್ತು ಗ್ರೀನ್ ಪಾರ್ಕ್ ಮೈದಾನದ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಮುಂಬೈ ನಿವಾಸಿ ಸಂದೀಪ್ ಶೆಟ್ಟಿ ಎಂಬಾತ ದುಬೈನ ಹೊಟೇಲ್‌ನಲ್ಲಿ ಮ್ಯಾನೇಜರ ಆಗಿದ್ದು, ಈತ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮೂಲಕ ಸಾಗಾಟ ಮಾಡುತ್ತಿದ್ದು, ಬೆಂಗಳೂರಿನಿಂದ ಸಾಗಾಟ ಮಾಡಲು ಎಡಲ್ ರೋಜ್‌ನನ್ನು ಈತ ನೇಮಿಸಿದ್ದ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Share News