• Home  
  • *ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ *
- HOME

*ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ *

ಮಂಗಳೂರು, ಮಾರ್ಚ್ 15: ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ, ಉತ್ಕರ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ವೆಲ್ಫೇರ್ (UCWT) ಹಾಗೂ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ‘ವಿಶ್ವ ಮಹಿಳಾ ದಿನಾಚರಣೆ’ಯ ಅಂಗವಾಗಿ ಪೌರ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ವಲಯ ಆಯುಕ್ತರಾದ ಶ್ರೀ ಬಾಲಚಂದ್ರ ಅವರು, ಸಮಾಜದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ […]

Share News

ಮಂಗಳೂರು, ಮಾರ್ಚ್ 15: ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ, ಉತ್ಕರ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ವೆಲ್ಫೇರ್ (UCWT) ಹಾಗೂ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ‘ವಿಶ್ವ ಮಹಿಳಾ ದಿನಾಚರಣೆ’ಯ ಅಂಗವಾಗಿ ಪೌರ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ವಲಯ ಆಯುಕ್ತರಾದ ಶ್ರೀ ಬಾಲಚಂದ್ರ ಅವರು, ಸಮಾಜದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.


ಪ್ರಸಾದ ನೇತ್ರಾಲಯದ ಡಾ. ಸಾಗರ್ ಅವರ ನೇತೃತ್ವದ ತಂಡವು ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಿತು. ಮಹಿಳಾ ಕಾರ್ಮಿಕರಿಗಾಗಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಕಸದಿಂದ ರಸ’ ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಲಯ ಆಯುಕ್ತರು ಬಹುಮಾನಗಳನ್ನು ವಿತರಿಸಿದರು. ನಂತರ ಮಹಿಳೆಯರಿಗಾಗಿ ಮನೋರಂಜನಾ ಆಟಗಳನ್ನು (Fun Games) ಆಯೋಜಿಸುವ ಮೂಲಕ ದಿನವನ್ನು ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ವಲಯ ಆಯುಕ್ತರಾದ ಶ್ರೀ ಬಾಲಚಂದ್ರ,ಕಂದಾಯ ಅಧಿಕಾರಿ ದೇವೇಂದ್ರಪ್ಪ ಪರಾರಿ ಹಾಗೂ ಪ್ರೋಗ್ರಾಮ್ ಮ್ಯಾನೇಜರ್ ಅರುಂಧತಿ ಹೆಗ್ಡೆ, ಪ್ರೋಗ್ರಾಮ್ ಅಡ್ವೈಜರ್ ಶ್ರೀ ಸ್ಟಿವನ್, ಮತ್ತು ಪ್ರಸಾದ ನೇತ್ರಾಲಯ ದ ಡಾಕ್ಟರ್ ಸಾಗರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸಿಬ್ಬಂದಿ ವರ್ಗದವರು, ಮಹಿಳಾ ಕಾರ್ಮಿಕರು. ಹಾಗೂ ಸಮುದಾಯ ಸಂಘಟಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Share News