Site icon canaratvnews

ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: 32.06 ಲಕ್ಷರೂ. ವಂಚನೆ; ದೂರು

ಮಂಗಳೂರು, ನ. 3: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭಾಂಶ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಸೆ. 9ರಂದು ಫೇಸ್‌ಬುಕ್ ನೋಡುತ್ತಿರುವ ಸಂದರ್ಭದಲ್ಲಿ ಕಾವ್ಯಾ ಶೆಟ್ಟಿ ಹೆಸರಿನಲ್ಲಿ ಸ್ನೇಹದ ವಿನಂತಿ ಬಂದಿತ್ತು. ಅದಕ್ಕೆ ಒಪ್ಪಿಗೆ ನೀಡಿ ಅವರೊಂದಿಗೆ, ಸಂದೇಶಗಳ ವಿನಿಮಯ ನಡೆಸಿದ್ದರು ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು.ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಳು. ಇದರಿಂದ ಆಸಕ್ತನಾಗಿ ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ್ದಾರೆ.
ಅನಂತರ ಕಾವ್ಯಾ ತನ್ನ ವಾಟ್ ಆ್ಯಪ್ ನಂಬರ್‌ನಿಂದ ಲಿಂಕ್ ಕಳುಹಿಸಿ ಅದಕ್ಕೆ ಸೇರುವಂತೆ ತಿಳಿಸಿದಳು. ಲಿಂಕ್ ಒತ್ತಿದಾಗ ಟ್ರೇಡಿಂಗ್ ಆ್ಯಪ್ ತೆರೆದುಕೊಂಡಿತು. ಬಳಿಕ ಹೆಸರು, ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿದರು. ಬಳಿಕ ಷೇರು ಖರೀದಿಸಲು 40,000 ರೂ. ಪಾವತಿಸುವಂತೆ ತಿಳಿಸಿದ್ದು, ಸೆ.13ರಂದು ಪಾವತಿ ಮಾಡಿದ್ದರು.
ಲಾಭಾಂಶವಾಗಿ 9,504 ರೂ. ಖಾತೆಗೆ ಜಮೆಯಾಗಿದೆ. ಅನಂತರ 2,00,000 ರೂ. ಹಾಕಿದಾಗ ಅದಕ್ಕೆಲಾಭಾಂಶವಾಗಿ 23,760 ರೂ. ಜಮೆಯಾಗಿದೆ. ಇದರಿಂದ ನಂಬಿಕೆ ಬಂದಿದ್ದು, ಹಂತ ಹಂತವಾಗಿ ಒಟ್ಟು 32,06,880 ರೂ. ಗಳನ್ನು ಸೆ.13ರಿಂದ ಅ.24ರ ವರೆಗೆ ಕಾವ್ಯಾ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು.
ಆದರೆ ಅನಂತರ ಯಾವುದೇ ಲಾಭಾಂಶವೂ ದೊರೆಯದೆ, ಹೂಡಿಕೆ ಮಾಡಿದ ಹಣವನ್ನೂ ವಾಪಸು ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Share News
Exit mobile version