canaratvnews

ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್‌ ಸಂಯೋಜಕರಾಗಿ ಫಾ. ನವೀನ್ ಪಿಂಟೊ ನೇಮಕ

ಮಂಗಳೂರು ಜೂನ್ 18 : ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್ ನೂತನ ಸಂಯೋಜಕರಾಗಿ ಫಾ. ನವೀನ್ ಪಿಂಟೊ ಅವರನ್ನು ನೇಮಕ ಮಾಡಲಾಗಿದೆ. ಜೂನ್‌ 18 ರಿಂದ ಅನ್ವಯವಾಗುವಂತೆ ಈ ನೇಮಕಾತಿ ಆದೇಶವನ್ನು ಧರ್ಮ ಪ್ರಾಂತ್ಯ ಹೊರಡಿಸಿದೆ.


ಫಾ. ನವೀನ್ ಪ್ರಸ್ತುತ ಕೊಡಿಯಾಲ್‌ ಬೈಲ್‌ ಬಿಷಪ್ಸ್ ಹೌಸ್‌ನಲ್ಲಿ 2023 ರಿಂದ ಜ್ಯುಡೀಶಿಯಲ್‌ ವಿಕಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2022 ರಿಂದ 2025 ರವರೆಗೆ ಜೆಪ್ಪು ಸೈಂಟ್‌ ಜೋಸೆಫ್ ಸೆಮಿನರಿಯ ಆಡಳಿತಾಧಿಕಾರಿ ಆಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಸೆಮಿನರಿಯಲ್ಲಿ ಸಂದರ್ಶಕ ಅಧ್ಯಾಪಕರಾಗಿ ಸೇವೆಯನ್ನು ಮುಂದುವರಿಸಲಿದ್ದಾರೆ. ಇದೀಗ ಹೆಚ್ಚುವರಿಯಾಗಿ ಧರ್ಮಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್‌ ಗಳ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ. ಆಂಜೆಲೋರ್‌ ಚರ್ಚ್ ಅವರು ವಾಸ್ತವ್ಯ ಮಾಡುವರು. .
ಪ್ಯಾಸ್ಟೋರಲ್ ಕಮಿಷನ್‌ ಎನ್ನುವುದು ಧರ್ಮಪ್ರಾಂತ್ಯದ ಅವಿಭಾಜ್ಯ ಭಾಗವಾಗಿದ್ದು, ಧಾರ್ಮಿಕ ಶಿಕ್ಷಣ, ಯೂತ್‌ ಅಪೋಸ್ಟೊಲೇಟ್, ಸಾಮಾಜಿಕ ಕಾಳಜಿಯ ಕಾರ್ಯಗಳು, ಅಂತರ್ ಧರ್ಮೀಯ ಸಂವಾದ, ಪ್ರಾರ್ಥನೆ ಮತ್ತು ಕುಟುಂಬ ಜೀವನ ಮುಂತಾದ ಕ್ಷೇತ್ರಗಳ ಸೇವೆಗಳನ್ನು ಒಳಗೊಂಡಿರುತ್ತದೆ.

ಇದುವರೆಗೆ ಅಂದರೆ 2023 ಮೇ 29 ರಿಂದ ಫಾ. ಫೌಸ್ತಿನ್ ಲ್ಯೂಕಾಸ್ ಲೋಬೊ ಅವರು ಈ ಕಮಿಷನ್‌ ಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಫಾ. ಫೌಸ್ತಿನ್ ಲ್ಯೂಕಾಸ್ ಲೋಬೊ ಅವರು ಪ್ರಸ್ತುತ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಂದ ತೆರವಾದ ಹುದ್ದೆಗೆ ಫಾ, ನವೀನ್‌ ನೇಮಕಗೊಂಡಿದ್ದಾರೆ.

Share News
Exit mobile version