ಕಂಕನಾಡಿ, ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನೂತನ ನಿರ್ದೇಶಕರಾಗಿ ವಂ. ಪೌಸ್ತಿನ್ ಲೂಕಸ್ ಲೋಬೊ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ನಿರ್ದೇಶಕರ ಅಧಿಕಾರ ಸ್ವೀಕಾರ ಸಮಾರಂಭಕಂಕನಾಡಿ ಫಾದರ್ ಮುಲ್ಲರ್ ಸಂಸ್ಥೆಗಳ ಆವರಣದ ಸೈಂಟ್ ಜೋಸೆಫ್ ಚಾಪೆಲ್ ನಲ್ಲಿ ಬುಧವಾರ ನಡೆಯಿತು.

ನಿರ್ಗಮನ ನಿರ್ದೇಶಕ ಫಾದರ್ ರಿಚರ್ಡ್ ಅಲೋಷಿಯಸ್ ಕುವೆಲ್ಲೊ ಅವರನ್ನು ಬೀಳ್ಕೊಡುಗೆ ನೀಡಲಾಯಿತು. ನಿಯೋಜಿತ ನಿರ್ದೇಶಕರಾಗಿದ್ದ ಫಾದರ್ ಫೌಸ್ತಿನ್ ಲೂಕಸ್ ಲೋಬೊ ಅವರಿಗೆ ಸ್ವಾಗತ ಕೋರಲಾಯಿತು.
ಫಾದರ್ ಮುಲ್ಲರ್ ಸಂಸ್ಥೆಗಳ ಉಪಾಧ್ಯಕ್ಷ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾದರ್ ಮ್ಯಾಕ್ಸಿಮ್ ಎಲ್.ನೊರೊನ್ ಪ್ರಾರ್ಥನೆ ನಡೆಸಿಕೊಟ್ಟರು. ಹಿರಿಯ ಚಾಪ್ಲೈನ್ ಫಾದರ್ ರೊನಾಲ್ಡ್ ಲೋಬೊ ನಿರ್ಗಮನ ನಿರ್ದೇಶಕ ಮತ್ತು ನಿಯೋಜಕ ನಿರ್ದೇಶಕರಿ ಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನೆರವೇರಿತು.
ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮನ ನಿರ್ದೇಶಕ ಫಾದರ್ ರಿಚಾರ್ಡ್ ಅಲೋಷಿಯಸ್ ಕುವೆಲ್ಲೊ ತಮ್ಮ 17 ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ನಿರ್ದೇಶಕ ಫಾ. ಫೌಸ್ತಿನ್ ಲೂಕಸ್ ಲೋಬೊ ಅವರು ನಿರ್ಗಮನ ನಿರ್ದೇಶಕರಿಗೆ ಶುಭ ಹಾರೈಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜನ ಡೀನ್ ಡಾ.ಆ್ಯಂಟನಿ ಸಿಲ್ವನ್ ಡಿಸೋಜ ಮತ್ತು ವೈಸ್ ಡೀನ್ ಡಾ. ವೆಂಕಟೇಶ್ ಬಿ.ಎಂ. ಅವರು ರಿಚಾರ್ಡ್ ಕುವೆಲ್ಲೊ ಅವರ ಸುದೀರ್ಘ ಸೇವೆಯನ್ನು ಸ್ಮರಿಸಿದರು.









