• Home  
  • *ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣ ದಿವಸ್ ಆಚರಣೆ*
- COMMUNITY NEWS - HOME

*ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣ ದಿವಸ್ ಆಚರಣೆ*

ಪೆರುವಾಯಿ, ಫೆ. 26: ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣದ ದಿನವನ್ನು ಆಚರಿಸಲಾಯಿತು. ಮೊದಲು ಪವಿತ್ರ ಬಲಿ ಪೂಜೆಯನ್ನು ಫಾ. ಸೈಮನ್ ಡಿ ಸೋಜ‌ ಅವರು ನೆರವೇರಿಸಿದರು. ಬಳಿಕ ಪ್ರವಚನ ನೀಡಿದ ಅವರು, ಮಕ್ಕಳಿಗೆ ಶಾಲಾ ಪಾಠದ ಜೊತೆಗೆ ಭಾನುವಾರ ಕ್ರೈಸ್ತ ಶಿಕ್ಷಣ ಅತೀ ಅಗತ್ಯ. ಕ್ರೈಸ್ತ ಶಿಕ್ಷಣ ಕಲಿಸಲು ಮುಂದೆ ಬಂದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಇದು ಒಂದು ದೇವರ ಸೇವೆ. ಎಲ್ಲರಿಗೂ ಇದರ ಭಾಗ್ಯ ಸಿಗುವುದಿಲ್ಲ. ನಿಮ್ಮ ಸಮಯವನ್ನು ತ್ಯಾಗ ಮಾಡಿ […]

Share News

ಪೆರುವಾಯಿ, ಫೆ. 26: ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣದ ದಿನವನ್ನು ಆಚರಿಸಲಾಯಿತು. ಮೊದಲು ಪವಿತ್ರ ಬಲಿ ಪೂಜೆಯನ್ನು ಫಾ. ಸೈಮನ್ ಡಿ ಸೋಜ‌ ಅವರು ನೆರವೇರಿಸಿದರು.


ಬಳಿಕ ಪ್ರವಚನ ನೀಡಿದ ಅವರು, ಮಕ್ಕಳಿಗೆ ಶಾಲಾ ಪಾಠದ ಜೊತೆಗೆ ಭಾನುವಾರ ಕ್ರೈಸ್ತ ಶಿಕ್ಷಣ ಅತೀ ಅಗತ್ಯ. ಕ್ರೈಸ್ತ ಶಿಕ್ಷಣ ಕಲಿಸಲು ಮುಂದೆ ಬಂದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಇದು ಒಂದು ದೇವರ ಸೇವೆ. ಎಲ್ಲರಿಗೂ ಇದರ ಭಾಗ್ಯ ಸಿಗುವುದಿಲ್ಲ. ನಿಮ್ಮ ಸಮಯವನ್ನು ತ್ಯಾಗ ಮಾಡಿ ಮಕ್ಕಳಿಗೋಸ್ಕರ ನೀವು ಶ್ರಮಿಸುತ್ತಿರುವುದು. ಒಂದು ಒಳ್ಳೆಯ ಕಾರ್ಯವೆಂದರು.

ಬಳಿಕ ಪ್ರತಿದಿನ ತರಗತಿಗೆ ಹಾಜರಾದ ಮಕ್ಕಳಿಗೆ ಹಾಗೂ ಪರೀಕ್ಷೆಯಲ್ಲಿ ಪ್ರಥಮ. ದ್ವಿತೀಯ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮಕ್ಕಳಿಗೆ ಕೊಂಕಣಿ ಬರೆಯುವುದರಲ್ಲಿ ಅಂದದ ಬರಹಕ್ಕೆ ಬಹುಮಾನ ವಿತರಿಸಲಾಯಿತು.

ಮಂಗಳೂರು ಧರ್ಮಕೇಂದ್ರದ ಮಂಗಳ ಜ್ಯೋತಿ
ಸಂಸ್ಥೆ ಆಯೋಜಿಸಿದ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದ ಚರ್ಚಿನ ವಿದ್ಯಾರ್ಥಿನಿ ರೆನಿಶ ಡಿ ಸೋಜ‌ ಅವರನ್ನು ಸನ್ಮಾನಿಸಲಾಯಿತು.

ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನ್ನಿಸ್ ಮೊಂತೆರೊ ಕಾರ್ಯದರ್ಶಿ ವಿನ್ಸೆಂಟ್ ಡಿ ಸೋಜ ಇದ್ದರು.

ಶಿಕ್ಷಕ ಶಿಕ್ಷಕಿಯರನ್ನು ಗೌರವಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಶಿಕ್ಷಕ ಜಯಪ್ರಕಾಶ್ ಹಾಗೂ ಶಿಕ್ಷಕಿಯರಾದ ಲೂಸಿ ಡಿ ಸೋಜ‌. ಲೀಡಿಯಾ ರೋಡ್ರಿಗಸ್,ಜೆಸಿಂತ ಡಿ ಸೋಜ‌, ನಿಕ್ಷಿತಾ ಡಿ ಸೋಜ‌, ಜ್ಯೋತಿ ಡಿ ಸೋಜ‌ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಕ್ರೈಸ್ತ ಶಿಕ್ಷಣದ ಸಂಯೋಜಕಿ ಲೀಡಿಯಾ ರೋಡ್ರಿಗಸ್ ನಿರೂಪಿಸಿದರು. ಅಭಿನಂದನಾ ಕಾರ್ಯವನ್ನು ಲೈನಿಯಾ ಡಿ ಸೋಜ‌ ನೆರವೇರಿಸಿದರು. ನಂತರ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Share News