• Home  
  • *ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಸಂಭ್ರಮ*
- DAKSHINA KANNADA - HOME

*ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಸಂಭ್ರಮ*

ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ‌ಫಿತ್ರ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ನಮಾಝ್ ಮತ್ತು ಕುತುಬಾ ಪಾರಾಯಣದ ಬಳಿಕ ಸೌಹಾರ್ದತೆಯ ಸಂದೇಶ ಸಾರಲಾಯಿತು. ಈ ಸಂದರ್ಭದಲ್ಲಿ ಈದ್ ಸಂದೇಶ ನೀಡಿದ ಖತೀಬ್ ಅಲ್ ಹಾಜ್ ಅಬ್ದುಲ್ ನಾಸೀರ್ ಸಾದಿ ಅವರು, “ಬಡವರು, ಅನಾಥರು ಮತ್ತು ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ. ಈದ್ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ ತ್ಯಾಗ ಮತ್ತು ಸಹಾನುಭೂತಿಯ ಸಂಕೇತವಾಗಬೇಕು. ಪರಸ್ಪರ ವೈಷಮ್ಯ ಮರೆತು ಸೌಹಾರ್ದತೆಯಿಂದ ಬಾಳಬೇಕು. ದೇವರು ನೀಡಿದ ಆರೋಗ್ಯ, […]

Share News

ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ‌ಫಿತ್ರ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ನಮಾಝ್ ಮತ್ತು ಕುತುಬಾ ಪಾರಾಯಣದ ಬಳಿಕ ಸೌಹಾರ್ದತೆಯ ಸಂದೇಶ ಸಾರಲಾಯಿತು.

ಈ ಸಂದರ್ಭದಲ್ಲಿ ಈದ್ ಸಂದೇಶ ನೀಡಿದ ಖತೀಬ್ ಅಲ್ ಹಾಜ್ ಅಬ್ದುಲ್ ನಾಸೀರ್ ಸಾದಿ ಅವರು, “ಬಡವರು, ಅನಾಥರು ಮತ್ತು ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ. ಈದ್ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ ತ್ಯಾಗ ಮತ್ತು ಸಹಾನುಭೂತಿಯ ಸಂಕೇತವಾಗಬೇಕು. ಪರಸ್ಪರ ವೈಷಮ್ಯ ಮರೆತು ಸೌಹಾರ್ದತೆಯಿಂದ ಬಾಳಬೇಕು. ದೇವರು ನೀಡಿದ ಆರೋಗ್ಯ, ಸಂಪತ್ತು ಮತ್ತು ಸಮಯವನ್ನು ಜೂಜಾಟ, ಮದ್ಯಪಾನದಂತಹ ಅನೈತಿಕ ಚಟುವಟಿಕೆಗಳಿಗೆ ವ್ಯಯಿಸಬಾರದು” ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಮಸೀದಿಯ ಮಹಾದ್ವಾರವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮ.ನ.ಪಾ ನಿಕಟಪೂರ್ವ ಸದಸ್ಯ ಅಶ್ರಫ್ ಕೆ.ಇ, ಬಿ.ಜೆ.ಎಂ ಮಾಜಿ ಅಧ್ಯಕ್ಷ ಹಾಜಿ ಬಿ.ಎನ್ ಅಬ್ಬಾಸ್, ಉಪಾಧ್ಯಕ್ಷ ಮುಹಮ್ಮದ್, ಸಂಚಾಲಕ ಬಿ. ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ನಝೀರ್ ಪಾಂಡೆಲ್, ಕಾರ್ಯದರ್ಶಿ ಮುಹಮ್ಮದ್ ಹನೀಫ್, ಮೇಲುಸ್ತುವಾರಿ ಅಶ್ರಫ್ ತೋಟ ಹಾಗೂ ಸದಸ್ಯರಾದ ನಝೀರ್ ಬಜಾಲ್, ಯೂಸುಫ್, ಇಕ್ಬಲ್ ಅಸಾನಿ, ಅಬ್ದುಲ್ ರಹಿಮಾನ್ ಮದನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Share News