ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಮಂಗಳೂರು ಇದರ ಅದೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ 1500ನೇ ಈದ್ ಮೀಲಾದುನ್ನೆಬಿ ಸಡಗರ ಸಂಭ್ರಮದಿಂದ ದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರವೂಫ್ ರವರು ಧ್ವಜಾರೋಹಣ ಗೈದು ಪ್ರಸ್ತುತ ರ್ಯಾಲಿಗೆ ಚಾಲನೆ ನೀಡಿದರು.
ಕಾರ್ಯಕ್ರಮನ್ನು ಜಮಾಅತ್ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆ ಮಾಡಿ ಉದ್ಘಾಟನೆ ಮಾಡಿದರು. ತನ್ನ ಭಾಷಣದಲ್ಲಿ ಈ ಮೀಲಾದ್ ರ್ಯಾಲಿ ಶಾಂತಿ ಸಮಾಧಾನ ಸೌಹಾರ್ದತೆಯನ್ನು ಸಾರುವುದಾಗಿದೆ.
ಪರಸ್ಪರ ಸೌಹಾರ್ದತೆಯೊಂದಿಗೆ ಬಾಳೋಣ ಎಂದು ಅವರು ಹೇಳಿದರು.
ರ್ಯಾಲಿಯಲ್ಲಿ ಹಯತುಲ್ ಇಸ್ಲಾಂ ಮದರಸ ಬಜಾಲ್ ನಂತೂರ್, ಫೈಝಲ್ ನಗರ ನಮಾವುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿಯರು ಸ್ಕೌಟ್, ಫ್ಲವರ್ ಶೋ, ದಫ್ ಪ್ರದರ್ಶಿಸಿದರು.ತರ್ಬಿಯತುಲ್ ಇಸ್ಲಾಂ ದರ್ಸ್ನಲ್ಲಿ ಕಲಿಯುವ ಮುತಃಲ್ಲಿಮ್ ನವರು ಭಾಗವಹಿಸಿದರು. ರ್ಯಾಲಿಯಾ ಉದ್ದಕ್ಕೂ ಐಸ್ಕ್ರಿಮ್, ಚಾಕ್ಲೆಟ್, ತಂಪು ಪಾನೀಯ, ಫಲೂದ, ಬಿರಿಯಾನಿ, ಹಣ್ಣು ಅಂಪಲು ಇನ್ನಿತರು ಸಿಹಿತಿಂಡಿ ನೀಡಿದರು.
ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಅಶ್ರಫ್ ಕೆ, ಹನೀಫ್ ಎಚ್ ಎಸ್, ಎಂ ಎಚ್ ಮುಹಮ್ಮದ್ ಫೈಝಲ್ ನಗರ್, ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್, ಕೊಸಧಿಕಾರಿ ಅಬ್ದುಲ್ ಸಲಾಂ, ಸಂಚಾಲಕರು ಬಿ ಪಕೃದ್ದಿನ್, ಮಾಜಿ ಅಧ್ಯಕ್ಷರು ಬಿ ಎನ್ ಅಬ್ಬಾಸ್, ಗೌಸಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಝಕ್, ಖತೀಬರಾದ ಇಸಾಕ್ ಹಮೀದಿ, ಉಪಾಧ್ಯಕ್ಷರು ಮುಹಮ್ಮದ್ ರಫೀಕ್, ತರ್ಬಿಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷರಾದ ಹುಸೇನ್ ಶಾoತಿನಗರ, ಜೆ ಎಫ್ ಅಸೋಸಿಯೇಷನ್ (ರಿ)ಅಧ್ಯಕ್ಷ ನಝೀರ್ ಬಜಾಲ್, ಎಸ್ ಕೆ ಎಸ್ ಎಸ್ ಎಫ್ ನ ಅಧ್ಯಕ್ಷ ಹಮ್ಮಬ್ಬಾ ಮೋನಕ, ನಾಸೀರ್ ಎನ್ ಎಸ್ ಆರ್ ಹಾಗೂ ಜಮಾತರು ಭಾಗವಹಿಸಿದರು.
ಸದರ್ ಮುಹಲ್ಲಿಮ್ ದ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿದರು.ಹಕೀಮ್ ಮದನಿ ನಿರೂಪಿಸಿದರು,
ಅಬೂಬಕ್ಕರ್ ಸಖಾಫಿ ವಂದಿಸಿದರು.