• Home  
  • ಈಸ್ಟರ್ ಹಬ್ಬದ ಸಂದೇಶ ನೀಡಿದ ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ
- COMMUNITY NEWS - DAKSHINA KANNADA - HOME - LATEST NEWS

ಈಸ್ಟರ್ ಹಬ್ಬದ ಸಂದೇಶ ನೀಡಿದ ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ

ಮಂಗಳೂರು: ಈಸ್ಟರ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ ಅವರು ಶುಭಾಶಯ ಕೋರಿ ಈಸ್ಟರ್‌ ಸಂದೇಶ ನೀಡಿದ್ದಾರೆ. ಆ ಸಂದೇಶ ಹೀಗಿದೆ.

“ಈಸ್ಟರ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನರಾದ ಸಂತೋಷವನ್ನು ನಾವು ಆಚರಿಸುತ್ತೇವೆ.

ಶಿಲುಬೆಯ ಮೇಲೆ ಅವರ ತ್ಯಾಗ ಮತ್ತು ಪುನರುತ್ಥಾನವು ನಮಗೆ ಆಶಾಕಿರಣವನ್ನು, ಕ್ಷಮೆಯನ್ನು ಮತ್ತು ದೇವರ ಶಾಶ್ವತ ಪ್ರೀತಿಯನ್ನು ತೋರಿಸುತ್ತದೆ. ಕ್ರಿಸ್ತರು ಮ್ರತ್ಯುಂಜಯರಾದ ಆಚರಣೆಯ ಈ ಪವಿತ್ರ ಈಸ್ಟರ್ ಹಬ್ಬದ ನಿಮಿತ್ತ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು.

ಈಸ್ಟರ್ ಎಂದರೆ ವಿಜಯದ ಹಬ್ಬ – ಕೇಡಿನ ಮೇಲೆ ಸದ್ಗುಣಗಳ ಜಯ, ಅಸತ್ಯದ ಮೇಲೆ ಸತ್ಯದ ಜಯ, ಅಂಧಕಾರದ ಮೇಲೆ ಬೆಳಕಿನ ಜಯ, ಮರಣದ ಮೇಲೆ ಜೀವದ ಜಯ. ಯೇಸು ಕ್ರಿಸ್ತರು ತಮ್ಮ ಮರಣ ಮತ್ತು ಪುನರುತ್ಥಾನದ ಮೂಲಕ ನಮಗೆ ನವಜೀವನದ ದಾರಿ ತೋರಿಸಿದ್ದಾರೆ.

ಅವರ ವಿಜಯದಲ್ಲಿ ನಾವು ಪಾಲುಗಾರರಾಗುವ ಮೂಲಕ, ನಮ್ಮ ಜೀವನದಲ್ಲಿ ಸತ್ಯ ಹಾಗು ಬೆಳಕಿನಲ್ಲಿ ನಡೆದು ಹೊಸ ಜೀವ ಪಡೆಯಬಹುದು.

ಈ ಈಸ್ಟರ್ ಸಮಯದಲ್ಲಿ ನಾವು ಸಹಾನುಭೂತಿ, ಕ್ಷಮೆ ಮತ್ತು ಪ್ರೀತಿಯ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಭರವಸೆ ಉಂಟುಮಾಡುವ ಸಂಕಲ್ಪವನ್ನು ಮಾಡೋಣ. ಕ್ರಿಸ್ತರು ತೋರಿಸಿದ ಮಾರ್ಗ ನಮ್ಮನ್ನು ನಡೆಸಲಿ. ನಾವು ಎಲ್ಲರಿಗೂ ದೇವರ ಪ್ರೀತಿಯ ಪ್ರತಿಬಿಂಬಗಳಾಗಿರೋಣ. ಒಗ್ಗಟ್ಟಿನಿಂದ, ದೇವರ ಕೃಪೆಯಲ್ಲಿ ನಾವು ಬೆಳೆಯುವ ಹಾಗು ನಮ್ಮ ಸುತ್ತಲಿನವರಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶವನ್ನು ಹಂಚಿಕೊಳ್ಳುವ.

ಇಂದು ಮತ್ತು ಸದಾ, ಕ್ರಿಸ್ತರ ಪುನರುತ್ಥಾನದ ಸಂತೋಷ ನಿಮ್ಮ ಕುಟುಂಬಗಳಿಗೆ ಆಶೀರ್ವಾದ ತರಲಿ ಎಂದು ಪ್ರಾರ್ಥಿಸುತ್ತೇನೆ.”

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678