• Home  
  • ಕರಾವಳಿ ಚರ್ಚ್‌ಗಳಲ್ಲಿ ಪಾಸ್ಕ ಹಬ್ಬದ ಸಂಭ್ರಮಾಚರಣೆ
- DAKSHINA KANNADA - HOME - LATEST NEWS

ಕರಾವಳಿ ಚರ್ಚ್‌ಗಳಲ್ಲಿ ಪಾಸ್ಕ ಹಬ್ಬದ ಸಂಭ್ರಮಾಚರಣೆ

ಮಂಗಳೂರು: ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆಯ ಬಲಿಪೂಜೆಗಳು ನಡೆಯಿತು. ಸಂಜೆ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ ಮಾಡುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ವ್ಯಕ್ತಿಗಳಾಗುವಂತೆ ಸಂದೇಶ ಸಾರಲಾಯಿತು. ಬೆಂಕಿ ಆಶೀರ್ವಚನ, ಮೆರವಣಿಗೆ, ಪಾಸ್ಕಾ ಗಾಯನ ನಡೆಯಿತು. ಹಳೆ ಹಾಗೂ […]

Share News

ಮಂಗಳೂರು: ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆಯ ಬಲಿಪೂಜೆಗಳು ನಡೆಯಿತು.

ಸಂಜೆ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ ಮಾಡುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ವ್ಯಕ್ತಿಗಳಾಗುವಂತೆ ಸಂದೇಶ ಸಾರಲಾಯಿತು. ಬೆಂಕಿ ಆಶೀರ್ವಚನ, ಮೆರವಣಿಗೆ, ಪಾಸ್ಕಾ ಗಾಯನ ನಡೆಯಿತು. ಹಳೆ ಹಾಗೂ ಹೊಸ ಒಡಂಬಡಿಕೆಗಳಿಂದ ದೇವರ ವಾಕ್ಯ ವಾಚನ ಹಾಗೂ ಗಾಯನ ನಡೆಸಲಾಯಿತು. ಧರ್ಮಗುರುಗಳು ಪುನರುತ್ಥಾನದ ಸಂದೇಶದೊಂದಿಗೆ ಪ್ರವಚನ ನೀಡಿದರು. ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಸಿ, ದೀಕ್ಷಾಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು.

ಮಂಗಳೂರು ಕೆಥೋಲಿಕ ಧರ್ಮಪ್ರಾಂತ್ಯದ ಬಂಟ್ವಾಳ, ಸುರತ್ಕಲ್, ಪುತ್ತೂರು, ಮಂಗಳೂರು, ಕಾಸರಗೋಡು, ವಿಟ್ಲ, ಮುಡಿಪು, ಬೆಳ್ತಂಗಡಿ ವಲಯಗಳಲ್ಲಿ ಸಂಭ್ರಮದಿಂದ ಹಬ್ಬದ ಆಚರಣೆ ನಡೆಯಿತು. ಪ್ರೊಟೆಂಸ್ಟಂಟ್ ಹಾಗೂ ಇತರ ಧರ್ಮಸಭೆ ವ್ಯಾಪ್ತಿಯಲ್ಲೂ ಆಚರಣೆಗಳು ನಡೆದವು.


ಮಂಗಳೂರಿನ ಬಿಷಪ್ ಅ|ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೋ ಕೆಥೆಡ್ರಲ್ ನಲ್ಲಿ ಪುನರುತ್ಥಾನದ ಬಲಿಪೂಜೆ ನೆರವೇರಿಸಿದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಡಿಸೋಜ ಸೇರಿದಂತೆ ಇತರ ಧರ್ಮಗುರುಗಳು ಇದ್ದರು.
ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿದ ಬಿಷಪ್ ಈಸ್ಟರ್ ಮೋಂಬತ್ತಿಯನ್ನು ಬೆಳಗಿದರು.

ಈಸ್ಟರ್ ಸಂದೇಶ ನೀಡಿದ ಬಿಷಪ್ ಅವರು, ಕ್ರಿಸ್ತರ ಪುನರುತ್ಥಾನ ಅವರ ಹಾದಿಯಲ್ಲಿ ನಡೆಯುವ ನಮಗೆ ಹೊಸ ಭರವಸೆ ಮೂಡಿಸುತ್ತದೆ. ಅಶಾಂತಿಯ ಸಮಾಜದಲ್ಲಿ ಶಾಂತಿ ನೆಲೆಸಲು ಶ್ರಮಿಸುವ ವ್ಯಕ್ತಿಗಳಾಗಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಅನ್ಯಾಯ, ಅನೀತಿಯ ವಾತಾವರಣದಿಂದ ಮಾನಸಿಕವಾಗಿ ನೊಂದು ನಿರಾಸೆಗೊಂಡಿರುವವರ ಬಾಳಲ್ಲಿ ಹೊಸ ಭರವಸೆ ಮೂಡಿಸುತ್ತದೆ. ದೇವ ಪುತ್ರನ ಪುನರುತ್ಥಾನ ನಮ್ಮ ಸಾವಿನ ಬಳಿಕ ಕ್ರಿಸ್ತರೊಂದಿಗೆ ಪುನರುತ್ಥಾನರಾಗುತ್ತೇವೆ ಎಂಬ ಭರವಸೆ ನೀಡುತ್ತದೆ ಎಂದರು.
ಬಿಷಪ್ ಅವರು ರವಿವಾರ ಈಸ್ಟರ್ ಹಬ್ಬದ ಬಲಿಪೂಜೆಯನ್ನು ಕೊಡಿಯಾಲ್‌ ಬೈಲ್ ಬಿಷಪ್ ನಿವಾಸದಲ್ಲಿ ಬೆಳಗ್ಗೆ ನೆರವೇರಿಸಲಿದ್ದಾರೆ.

 

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಈಸ್ಟರ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ವಂ. ಸೈಮನ್ ಡಿಸೋಜಾ ಅಗ್ನಿ ಆಶೀರ್ವಾದ ಮಾಡಿದರು. ಬಳಿಕ ಮೊಂಬತ್ತಿ ಬೆಳಗಿದರು. ಅದರಿಂದ ಕ್ರೈಸ್ತರು ಮೊಂಬತ್ತಿ ಬೆಳಗಿ ಮೆರವಣಿಗೆ ನಡೆಸಿದರು. ನಂತರ ಚರ್ಚ್ ನಲ್ಲಿ ಪಾಸ್ಕಾ ಗೀತೆ ಹಾಡಲಾಯಿತು. ಬಳಿಕ ಪವಿತ್ರ ಸ್ನಾನದ ಭರವಸೆ ನವೀಕರಿಸಲಾಯಿತು.

 

ವಾಮಂಜೂರು ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಬೆಳುವಾಯಿ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಫೆರಾರ್‌ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ನೀರ್‌ಮಾರ್ಗ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ವಲೆನ್ಸಿಯಾ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಕಿರೆಂ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ದೇರೆಬೈಲ್‌ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಬಂಟ್ವಾಳ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಪಾಲಡ್ಕ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ನಾರಾವಿ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಬೆಳ್ಳೂರು ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ದೇರಳಕಟ್ಟೆಯ ಪಾನೀರು ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಬೆಳ್ಳಾರೆ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ವಾಮದಪದವು ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಪೆರ್ಮನ್ನೂರು ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಉಪ್ಪಿನಂಗಡಿ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ವಿಜಯಡ್ಕ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಮಿಲಾಗ್ರಿಸ್‌ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ಮೂಡಬಿದ್ರೆ ನಗರ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

ವಿಟ್ಲ ಚರ್ಚ್‌ನಲ್ಲಿ ನಡೆದ ಪಾಸ್ಕ್‌ ಹಬ್ಬದ ಆಚರಣೆ

 

 

 

 

Share News