ಮಂಗಳೂರು: ಕರಾವಳಿಯ ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಿದ್ದಾರೆ.
ಮಂಗಳೂರಿನ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸಿದರು.
ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ ನಡೆಯಿತು. ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಚರ್ಚ್‌ಗಳಲ್ಲಿ ಜತೆಯಾದ ಕ್ರೈಸ್ತರು, ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ ಮಾಡುವ ಮೂಲಕ ಬೆಳಕಿನಲ್ಲಿ ನಡೆಯುವ ವ್ಯಕ್ತಿಗಳಾಗಬೇಕೆಂಬ ಸಂದೇಶ ಸಾರಲಾಯಿತು.
ಬಲಿಪೂಜೆಯಲ್ಲಿ ನಿರಂತರ ದೇವರ ವಾಕ್ಯ ಬೋಧನೆ ಹಾಗೂ ಕೀರ್ತನೆಗಳ ಗಾಯನ, ಪ್ರಧಾನ ಗುರುಗಳಿಂದ ಪ್ರವಚನ ನಡೆಯಿತು. ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಸಿ, ದೀಕ್ಷಾಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಬಂಟ್ವಾಳ, ಸುರತ್ಕಲ್, ಪುತ್ತೂರು, ಮಂಗಳೂರು, ಕಾಸರಗೋಡು, ವಿಟ್ಲ, ಮುಡಿಪು, ಬೆಳ್ತಂಗಡಿ ವಲಯಗಳಲ್ಲಿ ಸಂಭ್ರಮದಿಂದ ಹಬ್ಬದ ಆಚರಣೆ ಕಂಡುಬಂತು.
ಮಂಗಳೂರಿನ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸಿದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ. ಆಲ್ರೆಡ್ ಪಿಂಟೊ, ವಂ. ವಿನೋದ್ ಲೋಬೊ ಸೇರಿದಂತೆ ಇತರ ಧರ್ಮಗುರುಗಳು ಇದ್ದರು. ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿದ ಬಿಷಪ್ ಈಸ್ಟರ್ ಮೋಂಬತ್ತಿಯನ್ನು ಬೆಳಗಿದರು.
ಪೆರುವಾಯಿ ಫಾತಿಮಾ ಮಾತಾ ದೇವಾಲಯದಲ್ಲಿ ನಡೆದ ಈಸ್ಟರ್ ಜಾಗರಣೆ ಹಾಗೂ ಬಲಿಪೂಜೆ
ಈಸ್ಟರ್ ಸಂದೇಶ ನೀಡಿದ ಬಿಷಪ್ ಅವರು, ಪುನರುತ್ಥಾನರಾದ ಯೇಸು ಸ್ವಾಮಿ ನಮಗೆ ಹೊಸ ಭರವಸೆ ನೀಡುತ್ತಿದ್ದಾರೆ. ಸಮಾಜದಲ್ಲಿರುವ ಕೆಡುಕು, ಅನ್ಯಾಯ, ಅನೀತಿ ಕಂಡು ನಿರಾಶೆಗೆ ಒಳಗಾಗದೆ ಕ್ರಿಸ್ತರು ನಮಗೆ ಭರವಸೆಯ ದಾರಿ ತೋರುತ್ತಾರೆ.
ನಿರಂತರ ಅನ್ಯಾಯವಾಗುತ್ತಿದ್ದು, ಸ್ಥಿತಿವಂತರು ದುರ್ಬಳರಿಗೆ ದಬ್ಬಾಳಿಕೆ ಮಾಡುತ್ತಾರೆ. ಅಂತಹ ಸಂಕಟ ಅನುಭವಿಸುವವರಿಗೂ ನ್ಯಾಯ ಒದಗಿಸುವ ಭರವಸೆ ಕ್ರಿಸ್ತರು ನೀಡುತ್ತಾರೆ. ಜಗತ್ತಿನಲ್ಲಿ ನ್ಯಾಯ ಅನ್ಯಾಯದಿಂದ ತಪ್ಪಿಸಿಕೊಂಡರು ಕೊನೆಯ ನ್ಯಾಯ ನಿರ್ಣಯವನ್ನು ತಾನೇ ಮಾಡುತ್ತೇನೆ ಎನ್ನುವ ಭರವಸೆ ಅವರು ನೀಡಿದ್ದಾರೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುವುದು ಅವರ ಪುನರುತ್ಥಾನದ ಗುಟ್ಟಾಗಿದೆ ಎಂದರು.
ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರವಿವಾರ ಈಸ್ಟರ್ ಹಬ್ಬದ ಬಲಿಪೂಜೆಯನ್ನು ಕೊಡಿಯಾಲ್‌ಬಲ್ ಬಿಷಪ್ ನಿವಾಸದಲ್ಲಿ ನಡೆಸುವರು
ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ವ. ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು ಈಸ್ಟರ್ ಹಬದ್ಬ ವಿಧಿವಿದಾನಗೆಳನ್ನು ನೆರವೆರಿಸಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು.
ಯೇಸುಕ್ರಿಸ್ತನ ಪುನರುತ್ಥಾನದ ಸ್ಮರಣಾರ್ಥ ಈಸ್ಟರ್ ಆಚರಣೆ ಮಂಗಳೂರಿನ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಈಸ್ಟರ್ ಜಾಗರಣೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದವು.
ಮಂಗಳೂರಿನ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುವ ಪಾಸ್ಚಲ್ ಮೇಣದಬತ್ತಿಯನ್ನು ಆಶೀರ್ವದಿಸುವ ಮೂಲಕ ಸಮಾರಂಭವನ್ನು ಮುನ್ನಡೆಸಿದರು. ಪವಿತ್ರ ಯೂಕರಿಸ್ಟ್ ಪ್ರಾರಂಭವಾಗುವ ಮೊದಲು ಅವರು ಬೆಂಕಿ ಮತ್ತು ಪವಿತ್ರ ನೀರನ್ನು ಸಹ ಆಶೀರ್ವದಿಸಿದರು.
ಕ್ಯಾಥೆಡ್ರಲ್‌ನ ಧರ್ಮಗುರು ಫಾದರ್ ಆಲ್ಫ್ರೆಡ್ ಪಿಂಟೊ ಮತ್ತು ಫಾದರ್ ವಿನೋದ್ ಲೋಬೊ ಉಪಸ್ಥಿತರಿದ್ದರು.