• Home  
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿ, ಸಾಗಾಟಕ್ಕೆ ಡಿಕೆ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ಸಾಗಾಟ
- DAKSHINA KANNADA - HOME

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿ, ಸಾಗಾಟಕ್ಕೆ ಡಿಕೆ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ಸಾಗಾಟ

ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆರ್ಝಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‌ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ DK SAND BAZAAR APP ನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ

ಹಾಗೂ ಮಾನ್ಯ ಜಿಲ್ಲಾಧಿಕಾರಿಯವರು ಸೂಚಿಸಿರುವಂತೆ, ಸದರಿ ಮರಳನ್ನು ಸಾಗಾಟ ಮಾಡಲು ಇಚ್ಚಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ DK SAND BAZAAR APP ನಲ್ಲಿ ನೋಂದಾಯಿಸಿಕೊಳ್ಳಲು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಲಾಗಿರುತ್ತದೆ. ಅದರಂತೆ ದಿನಾಂಕ: 16-03-2025 ರಿಂದ DK SAND BAZAAR APP ಮುಖಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಆವಶ್ಯಕತೆ ಇರುವವರು Online (DK SAND BAZAAR APP) ಮುಖಾಂತರ ಪಡೆಯಬಹುದಾಗಿರುತ್ತದೆ. 15 ಮರಳು ಬ್ಲಾಕ್‌ಗಳಲ್ಲಿ 3.30,405 ಮೆ.ಟನ್ ಪರಿಸರ ವಿಮೋಚನಾ ಪತ್ರದಲ್ಲಿ ಮರಳು ಗಣಿಗಾರಿಕೆ ಮಾಡಲು ಲಭ್ಯವಿದ್ದು, ಪರಿಸರ ವಿಮೋಚನಾ ಪತ್ರದನ್ವಯ ಪ್ರತಿ ವರ್ಷ ಜೂನ್ 5 ರಿಂದ ಅಕ್ಟೋಬರ್ 15 ರವರೆಗೆ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧವಿರುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ನಿಷೇಧವಿರುತ್ತದೆ. ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿರುವ ಒಟ್ಟು 27,550 ಮೆ.ಟನ್ ಗಳಲ್ಲಿ ಮಾರ್ಚ್ 2025 ರಿಂದ ಇಲ್ಲಿಯವರೆಗೆ 12.126 ಮೆ.ಟನ್ ಅನ್ನು ಬುಕಿಂಗ್ ಆಪ್ ಮುಖಾಂತರ ವಿತರಿಸಲಾಗಿರುತ್ತದೆ. ಅಲ್ಲದೆ ಮರಳು ಗಣಿ ಗುತ್ತಿಗೆ ದಾಸ್ತಾನು ಕೇಂದ್ರದಲ್ಲಿ ಲಭ್ಯವಿರುವ 15,424 ಮೆ.ಟನ್ ಮರಳನ್ನು ಬುಕಿಂಗ್ ಮಾಡಲು dksandbazaar.com ವೆಬ್‌ಸೈಟ್‌ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿರುತ್ತದೆ. ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. Dk sand bazaar ಬುಕಿಂಗ್‌ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಇದ್ದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಯವರ ಕಛೇರಿ (ದೂರವಾಣಿ ಸಂಖ್ಯೆ: 0824-2429932/ 6364019555) ಸಂಪರ್ಕಿಸಬಹುದು ಎಂದು ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678