• Home  
  • ಜನಗಣತಿಗೆ ಸಹಕರಿಸಲು ಜಿಲ್ಲಾಧಿಕಾರಿ ಕರೆ
- DAKSHINA KANNADA - HOME - LATEST NEWS

ಜನಗಣತಿಗೆ ಸಹಕರಿಸಲು ಜಿಲ್ಲಾಧಿಕಾರಿ ಕರೆ

ಮಂಗಳೂರು:- ಕರ್ನಾಟಕದಲ್ಲಿ ಜನಗಣತಿಯ ಭಾಗವಾಗಿ ಮನೆಗಳ ಗಣತಿಯು ಎಪ್ರಿಲ್ 16 ರಿಂದ ಮೇ 15 ರವರೆಗೆ 30 ದಿನಗಳ ಕಾಲ ನಡೆಸಲಾಗುತ್ತದೆ. ಇದರಲ್ಲಿ “ಸ್ವಯಂ – ಎಣಿಕೆ” ಆಯ್ಕೆಯು ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಇರುತ್ತದೆ. ಮನೆ ಪಟ್ಟಿ ಮತ್ತು ಮನೆ ಗಣತಿ (ಊಐಔ) ಸಮಯದಲ್ಲಿ ವಸತಿ ಸ್ಥಿತಿ, ಲಭ್ಯವಿರುವ ಸೌಲಭ್ಯಗಳು, ಹೊಂದಿರುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆನ್ ಲೈನ್ ಪೊೀರ್ಟಲ್ https://censusindia.gov.in  ಅನ್ನು ಅನುಷ್ಠಾನಗೊಳಿಸಲಾಗಿದೆ. ಈ […]

Share News

ಮಂಗಳೂರು:- ಕರ್ನಾಟಕದಲ್ಲಿ ಜನಗಣತಿಯ ಭಾಗವಾಗಿ ಮನೆಗಳ ಗಣತಿಯು ಎಪ್ರಿಲ್ 16 ರಿಂದ ಮೇ 15 ರವರೆಗೆ 30 ದಿನಗಳ ಕಾಲ ನಡೆಸಲಾಗುತ್ತದೆ. ಇದರಲ್ಲಿ “ಸ್ವಯಂ – ಎಣಿಕೆ” ಆಯ್ಕೆಯು ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಇರುತ್ತದೆ. ಮನೆ ಪಟ್ಟಿ ಮತ್ತು ಮನೆ ಗಣತಿ (ಊಐಔ) ಸಮಯದಲ್ಲಿ ವಸತಿ ಸ್ಥಿತಿ, ಲಭ್ಯವಿರುವ ಸೌಲಭ್ಯಗಳು, ಹೊಂದಿರುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆನ್ ಲೈನ್ ಪೊೀರ್ಟಲ್ https://censusindia.gov.in  ಅನ್ನು ಅನುಷ್ಠಾನಗೊಳಿಸಲಾಗಿದೆ. ಈ ಕೆಳಗಿನ ಹಂತಗಳಲ್ಲಿ ಸಾರ್ವಜನಿಕರು ಸ್ವಯಂ ಗಣತಿಗೆ ಸಹಕರಿಸಬಹುದಾಗಿದೆ.


ಸ್ವಯಂ ಗಣತಿಗೆ ಹಂತಗಳು:
1. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ
2. ನಿಮ್ಮ ಸ್ಥಳವನ್ನು ಆಯ್ಕೆಮಾಡಿ
3. ನಕ್ಷೆಯಲ್ಲಿ ನಿಮ್ಮ ಮನೆಯನ್ನು ಪತ್ತೆ ಮಾಡಿ
4. ಮಾಹಿತಿಯನ್ನು ಭರ್ತಿ ಮಾಡಿ
5. ಸಲ್ಲಿಸಿ ಮತ್ತು ನಿಮ್ಮ ಎಸ್.ಇ ಐಡಿ ಪಡೆಯಿರಿ
6. ನಿಮ್ಮ ಎಸ್.ಇ ಐಡಿ ಅನ್ನು ಸುರಕ್ಷಿತವಾಗಿ ಇರಿಸಿ ಮತ್ತು ಗಣತಿದಾರರು ಭೇಟಿ ನೀಡಿದಾಗ ಅವರೊಂದಿಗೆ ಹಂಚಿಕೊಳ್ಳಬೇಕು.
ಎಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರು ಮತ್ತು ಮೇಲ್ವಿಚಾರಕರು ವಿವರಗಳನ್ನು ಪರಿಶೀಲಿಸಲು ಮನೆಗಳಿಗೆ ಭೇಟಿ ನೀಡುತ್ತಾರೆ. ಗಣತಿದಾರರಿಗೆ ಎಸ್.ಇ ಐಡಿ (Sಇ Iಆ) ಯನ್ನು ಸಲ್ಲಿಸಿ ಮತ್ತು ಡೇಟಾವನ್ನು ಮೌಲ್ಯೀಕರಿಸಬಹುದು. ಎಸ್.ಇ ಇಲ್ಲದಿದ್ದರೆ, ಗಣತಿದಾರರು ಕ್ಷೇತ್ರ ಭೇಟಿಯ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸುತ್ತಾರೆ.
ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿ, ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್ ಅಥವಾ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ವೆಬ್‍ಸೈಟ್ https://censusindia.gov.in ಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News