• Home  
  • *ಮಂಗಳೂರು ಧರ್ಮಪ್ರಾಂತ್ಯದಲ್ಲಿ ಹೊಸ ‘ಕೊಂಕಣಿ ರೋಮಿ ಮಿಸಾ ಗ್ರಂಥ’ ಲೋಕಾರ್ಪಣೆ ಜೂನ್ 7ರಿಂದ ಅಧಿಕೃತ ಜಾರಿ*
- DAKSHINA KANNADA - HOME

*ಮಂಗಳೂರು ಧರ್ಮಪ್ರಾಂತ್ಯದಲ್ಲಿ ಹೊಸ ‘ಕೊಂಕಣಿ ರೋಮಿ ಮಿಸಾ ಗ್ರಂಥ’ ಲೋಕಾರ್ಪಣೆ ಜೂನ್ 7ರಿಂದ ಅಧಿಕೃತ ಜಾರಿ*

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನವಾಗಿ ಅನುವಾದಗೊಂಡ ಮತ್ತು ಸಂಕಲನಗೊಂಡ ‘ಕೊಂಕಣಿ ರೋಮಿ ಮಿಸಾ ಗ್ರಂಥ’ವನ್ನು (Konkani Roman Missal) ಮಾರ್ಚ್ 25, ಬುಧವಾರದಂದು ಜೆಪ್ಪುವಿನ ಸೈಂಟ್ ಆಂಥೋನಿ ಆಶ್ರಮದಲ್ಲಿ ನಡೆದ ವಾರ್ಷಿಕ ಪಶುಪಾಲನಾ ಸಮಾಲೋಚನಾ ಸಭೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಅವರು ಈ ಪವಿತ್ರ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹೊಸ ಮಿಸಾ ಗ್ರಂಥವು ಧರ್ಮಪ್ರಾಂತ್ಯದಲ್ಲಿ ಜೂನ್ 7, 2026ರಂದು ‘ಪವಿತ್ರ […]

Share News

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನವಾಗಿ ಅನುವಾದಗೊಂಡ ಮತ್ತು ಸಂಕಲನಗೊಂಡ ‘ಕೊಂಕಣಿ ರೋಮಿ ಮಿಸಾ ಗ್ರಂಥ’ವನ್ನು (Konkani Roman Missal) ಮಾರ್ಚ್ 25, ಬುಧವಾರದಂದು ಜೆಪ್ಪುವಿನ ಸೈಂಟ್ ಆಂಥೋನಿ ಆಶ್ರಮದಲ್ಲಿ ನಡೆದ ವಾರ್ಷಿಕ ಪಶುಪಾಲನಾ ಸಮಾಲೋಚನಾ ಸಭೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಅವರು ಈ ಪವಿತ್ರ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹೊಸ ಮಿಸಾ ಗ್ರಂಥವು ಧರ್ಮಪ್ರಾಂತ್ಯದಲ್ಲಿ ಜೂನ್ 7, 2026ರಂದು ‘ಪವಿತ್ರ ಪರಮ ಪ್ರಸಾದದ ಹಬ್ಬದ’ (Corpus Christi) ದಿನದಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಘೋಷಿಸಿದರು.


ಐತಿಹಾಸಿಕ ಹೆಜ್ಜೆ: ಈ ಗ್ರಂಥವು ಈಗಾಗಲೇ ಫೆಬ್ರವರಿ 3, 2026 ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ (CCBI) ಸಭೆಯಲ್ಲಿ ಬಿಡುಗಡೆಗೊಂಡಿದ್ದು, ಈಗ ಸ್ಥಳೀಯ ಮಟ್ಟದಲ್ಲಿ ಚಾಲನೆ ನೀಡಲಾಗಿದೆ.
ಸಂಗೀತದ ನಿಯಮ: ಹೊಸ ಮಿಸಾ ಗ್ರಂಥದಲ್ಲಿ ಮೂಲ ಲ್ಯಾಟಿನ್ ಸಂಗೀತದ ಧಾಟಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಈ ಭಾಗಗಳಿಗೆ ಹೊಸ ರಾಗಗಳನ್ನು ಸಂಯೋಜಿಸಲು ಅವಕಾಶವಿಲ್ಲ ಎಂಬ ಮಹತ್ವದ ಸೂಚನೆಯನ್ನು ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಪೂಜೆಯ ವಿಧಿವಿಧಾನಗಳ ಅರ್ಥವನ್ನು ವಿವರಿಸುವ ‘ಅಮ್ಚೆ ಮಿಸ್ ತಾಚಾ ಉಗ್ಡಾಸಾಕ್’ (ವಂ| ವಲೇರಿಯನ್ ಫೆರ್ನಾಂಡಿಸ್), ವಿವಾಹ ಸಂಸ್ಕಾರದ ಕುರಿತಾದ ‘ಟುಗೆದರ್ ಫಾರೆವರ್ ಇನ್ ಕ್ರೈಸ್ಟ್’ (ವಂ| ಆಲ್ವಿನ್ ರಿಚರ್ಡ್ ಡಿಸೋಜಾ) ಹಾಗೂ ಜನಸಾಮಾನ್ಯರ ಪ್ರತಿಕ್ರಿಯೆಗಳನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಈ ಬೃಹತ್ ಕಾರ್ಯಕ್ಕಾಗಿ ವರ್ಷಗಳ ಕಾಲ ಶ್ರಮಿಸಿದ ವಂ| ಡಾ| ರೊನಾಲ್ಡ್ ಸೆರಾವೊ, ವಂ| ವಲೇರಿಯನ್ ಫೆರ್ನಾಂಡಿಸ್ ಮತ್ತು ವಂ| ವಿಜಯ್ ಮಚಾದೊ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ವಿಕಾರ್ ಜನರಲ್ ವಂ| ಮೆಕ್ಸಿಮ್ ನೊರೊನ್ಹಾ, ಚಾನ್ಸಲರ್ ವಂ| ವಿಕ್ಟರ್ ಜಾರ್ಜ್ ಡಿಸೋಜಾ, ಮಂಗಳ ಜ್ಯೋತಿ ನಿರ್ದೇಶಕ ವಂ| ರೋಹಿತ್ ಡಿಕೋಸ್ಟಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಪವಿತ್ರ ಗ್ರಂಥಗಳ ವಿತರಣೆಯ ಜವಾಬ್ದಾರಿಯನ್ನು ಮಂಗಳ ಜ್ಯೋತಿ ಸಂಸ್ಥೆಯು ವಹಿಸಿಕೊಂಡಿದೆ

Share News