canaratvnews

ನೀಟ್ ಸಾಧಕರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್  ಸನ್ಮಾನ


ಮಂಗಳೂರು, ಜೂ.17  ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ  ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನ ಮಾಡಿದರು.


   ಎಕ್ಸ್‍ಪರ್ಟ್  ಕಾಲೇಜಿನ  ವಿದ್ಯಾರ್ಥಿಗಳಾದ ನಿಖಿಲ್ ಸೊನ್ನದ್ (ಅಖಿಲ ಭಾರತ ಮಟ್ಟದ 17ನೇ ರ್ಯಾಂಕ್,ರಾಜ್ಯಮಟ್ಟದ ಪ್ರಥಮ  ರ್ಯಾಂಕ್) ಹಾಗೂ ಕೆ.ಜಿ. ನಿಧಿ (ಅಖಿಲ ಭಾರತ 84ನೇ ರ್ಯಾಂಕ್, ರಾಜ್ಯಮಟ್ಟದ 7ನೇ ರ್ಯಾಂಕ್ ಅವರಿಗೆ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.


     ಈ ಸಂದರ್ಭದಲ್ಲಿ    ಎಕ್ಸ್‍ಪರ್ಟ್  ವಿದ್ಯಾಸಂಸ್ಥೆಗಳ ಮುಖ್ಯಸ್ಥ  ನರೇಂದ್ರ ನಾಯಕ್,  ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

Share News
Exit mobile version