ಮಂಗಳೂರು ಜೂನ್ 17 ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಂಗಳವಾರ ನಗರದ ಪಂಪ್ ವೆಲ್ ಹಾಗೂ ಕೆತ್ತಿಕಲ್ ಗೆ ಭೇಟಿ ನೀಡಿದರು.
ಪಂಪ್ ವೆಲ್ ನಲ್ಲಿ ತೀವ್ರ ಮಳೆ ಸಂದರ್ಭದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿರುವ ಸಮಸ್ಯೆ ಪರಿಹರಿಸಲು ರಾಜಾ ಕಾಲುವೆಯಲ್ಲಿ ನೀರಿನ ಸರಾಗ ಹರಿವಿಗೆ ತಾಂತ್ರಿಕವಾಗಿ ಸಮಸ್ಯೆ ಬಗೆಹರಿಸಲು ಅವರು ನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಕೆತ್ತಿಕಲ್ ನಲ್ಲಿ ಇನ್ನಷ್ಟು ಭೂಕುಸಿತ ತಡೆಯಲು ಮತ್ತು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸುಗಮ ಸಂಚಾರಕ್ಕೆ ತಾಂತ್ರಿಕ ಪರಿಹಾರವನ್ನು ಕೂಡಲೇ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಿದರು.
ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.