• Home  
  • ವಿಶ್ವಶಾಂತಿಗಾಗಿ ಕ್ರೈಸ್ತರು ಮಾ.13ರಂದು ಉಪವಾಸ -ಪ್ರಾರ್ಥನೆ ಮಾಡಿ: ಮಂಗಳೂರು ಬಿಷಪ್‌ ಕರೆ
- COMMUNITY NEWS - DAKSHINA KANNADA - HOME - LATEST NEWS

ವಿಶ್ವಶಾಂತಿಗಾಗಿ ಕ್ರೈಸ್ತರು ಮಾ.13ರಂದು ಉಪವಾಸ -ಪ್ರಾರ್ಥನೆ ಮಾಡಿ: ಮಂಗಳೂರು ಬಿಷಪ್‌ ಕರೆ

ಮಂಗಳೂರು: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಭಾರತದ ಬಿಷಪರ ಮಂಡಳಿ ಅಧ್ಯಕ್ಷ ಅ.ವಂ. ಫಿಲಿಫ್‌ ನೆರಿ ಕಾರ್ಡಿನಲ್‌ ಫೆರಾವೋ ಅವರು ಎಂದು ಕರೆ ನೀಡಿದ್ದು, ಅದರಂತೆ ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಜೊತೆಗೆ  ಮಾರ್ಚ್ 8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ  ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ.ವಂ.ಡಾ. ಪೀಟರ್‌ ಪಾವ್ಲ್‌ ಸಲ್ಡಾನ […]

Share News

ಮಂಗಳೂರು: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಭಾರತದ ಬಿಷಪರ ಮಂಡಳಿ ಅಧ್ಯಕ್ಷ ಅ.ವಂ. ಫಿಲಿಫ್‌ ನೆರಿ ಕಾರ್ಡಿನಲ್‌ ಫೆರಾವೋ ಅವರು ಎಂದು ಕರೆ ನೀಡಿದ್ದು, ಅದರಂತೆ ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಜೊತೆಗೆ  ಮಾರ್ಚ್ 8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ  ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ.ವಂ.ಡಾ. ಪೀಟರ್‌ ಪಾವ್ಲ್‌ ಸಲ್ಡಾನ ಅವರು ಮನವಿ ಮಾಡಿದ್ದಾರೆ.

ಬಿಷಪರ ಮಂಡಳಿ ಅಧ್ಯಕ್ಷ ಅ.ವಂ. ಫಿಲಿಫ್‌ ನೆರಿ ಕಾರ್ಡಿನಲ್‌ ಫೆರಾವೋ

ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದುಃಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯವನ್ನುಂಟುಮಾಡುತ್ತಿದೆ. ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಭಾರತದ ಸಹೋದರ-ಸಹೋದರಿಯರ ಸುರಕ್ಷತೆ ಕುರಿತು ಕ್ರೈಸ್ತ ಧರ್ಮಸಭೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದು, ದೂರದೇಶದಲ್ಲಿ ದುಡಿದು ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವ ಅವರು ಧರ್ಮಸಭೆ ಮತ್ತು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕಾಗಿ ದೇವರ ಕೃಪೆಗೆ ಒಪ್ಪಿಸುವಂತೆ ಮನವಿ ಮಾಡಲಾಗಿದೆ.

ಈ ಸಂಕಷ್ಟದ ಘಟ್ಟವನ್ನು ದೇವರ ಕರುಣೆಗೆ ಅರ್ಪಿಸಬೇಕೆಂದು ಕರೆ ನೀಡಲಾಗಿದ್ದು, 2026ರ ಮಾರ್ಚ್ 8ರಂದು ಭಾನುವಾರವನ್ನು “ಶಾಂತಿಗಾಗಿ ಪ್ರಾರ್ಥನಾ ದಿನ”ವಾಗಿ ಆಚರಿಸಲು ಸೂಚಿಸಲಾಗಿದೆ. ಆ ದಿನ ವಿಶೇಷವಾಗಿ ಪವಿತ್ರ ಬಲಿಪೂಜೆಯ ಆಚರಣೆಯ ವೇಳೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಲಾಗಿದೆ. ಹಿಂಸಾಚಾರ ನಿಲ್ಲಲೆಂದು, ನಿರಪರಾಧಿಗಳ ರಕ್ಷಣೆಯಾಗಲೆಂದು ಹಾಗೂ ಜಗತ್ತಿನ ನಾಯಕರು ಜ್ಞಾನ ಮತ್ತು ಸಂಯಮದಿಂದ ನಡೆದುಕೊಳ್ಳಲೆಂದು ಭಕ್ತರ ಪ್ರಾರ್ಥನೆಗಳಲ್ಲಿ ವಿಶೇಷ ಉದ್ದೇಶಗಳನ್ನು ಸೇರಿಸಬಹುದು ಎಂದು ತಿಳಿಸಲಾಗಿದೆ.

 

ಅ.ವಂ.ಡಾ. ಪೀಟರ್‌ ಪಾವ್ಲ್‌ ಸಲ್ಡಾನ

ಇದೇ ವೇಳೆ, ಮಾರ್ಚ್ 8ರಿಂದ 14ರವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷವಾಗಿ ಪವಿತ್ರ ಜಪಸರ ಪ್ರಾರ್ಥನೆ ಮಾಡುವಂತೆ ಮನವಿ ಮಾಡಲಾಗಿದೆ. ಮಾರ್ಚ್ 13ರಂದು ಶುಕ್ರವಾರ ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಿ, ವಿಶ್ವಶಾಂತಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲರ ಸುರಕ್ಷತೆಗೆ ತ್ಯಾಗ ಸಮರ್ಪಿಸಲು ಕೋರಲಾಗಿದ್ದು ಸಾಮೂಹಿಕ ಪ್ರಾರ್ಥನೆ, ತಪಸ್ಸು ಮತ್ತು ಏಕತೆ ಮೂಲಕ ಸರ್ವಶಕ್ತ ದೇವರ ಮುಂದೆ ವಿನಮ್ರವಾದ ಮನವಿ ಸಲ್ಲಿಸಿ, ದ್ವೇಷದ ಮನೋಭಾವಗಳು ದೂರವಾಗಿ, ಹಿಂಸಾಚಾರ ನಿಂತು, ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಆಶಿಸಲಾಗಿದೆ ಎಂದು ಬಿಷಪರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News