• Home  
  • *ದಲಿತ್ ಸೇವಾ ಸಮಿತಿಯ ಹೋರಾಟದ ಫಲ: ಕಳಂಜದ ಬಡ ಕುಟುಂಬಕ್ಕೆ ಸೂರು – ಬಿ.ಕೆ. ಸೇಸಪ್ಪ ಬೆದ್ರಕಾಡು ಅವರಿಗೆ ಗೌರವಾರ್ಪಣೆ*
- LATEST NEWS

*ದಲಿತ್ ಸೇವಾ ಸಮಿತಿಯ ಹೋರಾಟದ ಫಲ: ಕಳಂಜದ ಬಡ ಕುಟುಂಬಕ್ಕೆ ಸೂರು – ಬಿ.ಕೆ. ಸೇಸಪ್ಪ ಬೆದ್ರಕಾಡು ಅವರಿಗೆ ಗೌರವಾರ್ಪಣೆ*

ಸುಳ್ಯ:ಏಪ್ರಿಲ್.6: ಅರಣ್ಯ ಇಲಾಖೆಯ ಜಾಗದಲ್ಲಿದ್ದು ಕೊಂಡು ಮೂಲಭೂತ ಸೌಕರ್ಯಗಳಿಂದ ವಂಚಿತ ರಾಗಿದ್ದ ಬಡ ಕುಟುಂಬವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಹೋರಾಟದ ಫಲವಾಗಿ ಇಂದು ಸುಸಜ್ಜಿತ ಮನೆಯ ಕನಸು ನನಸಾಗಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕೋಟೆ ಮುಂಡುಗಾರ್ ನಿವಾಸಿಗಳಾದ ಕೃಷ್ಣ ನಾಯ್ಕ್ ಮತ್ತು ಅನುರಾಧ ದಂಪತಿಗಳು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿ ವಾಸವಿದ್ದರು. ಇವರಿಗೆ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ ಹಾಗೂ ಮನೆ ನಿರ್ಮಿಸಲು ಅಡೆತಡೆಗಳಿದ್ದವು. ಈ ಬಗ್ಗೆ ಕುಟುಂಬವು […]

Share News

ಸುಳ್ಯ:ಏಪ್ರಿಲ್.6: ಅರಣ್ಯ ಇಲಾಖೆಯ ಜಾಗದಲ್ಲಿದ್ದು ಕೊಂಡು ಮೂಲಭೂತ ಸೌಕರ್ಯಗಳಿಂದ ವಂಚಿತ ರಾಗಿದ್ದ ಬಡ ಕುಟುಂಬವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಹೋರಾಟದ ಫಲವಾಗಿ ಇಂದು ಸುಸಜ್ಜಿತ ಮನೆಯ ಕನಸು ನನಸಾಗಿದೆ.

ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕೋಟೆ ಮುಂಡುಗಾರ್ ನಿವಾಸಿಗಳಾದ ಕೃಷ್ಣ ನಾಯ್ಕ್ ಮತ್ತು ಅನುರಾಧ ದಂಪತಿಗಳು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿ ವಾಸವಿದ್ದರು. ಇವರಿಗೆ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ ಹಾಗೂ ಮನೆ ನಿರ್ಮಿಸಲು ಅಡೆತಡೆಗಳಿದ್ದವು. ಈ ಬಗ್ಗೆ ಕುಟುಂಬವು ದಲಿತ್ ಸೇವಾ ಸಮಿತಿಗೆ ಮನವಿ ಮಾಡಿತ್ತು. ಸಂಘಟನೆಯು ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿ, ಕುಟುಂಬಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪುಟ್ಟ ಮನೆ ನಿರ್ಮಿಸಲು ಅವಕಾಶ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.

ಸಂಘಟನೆಯ ಈ ಮಾನವೀಯ ಸ್ಪಂದನೆಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಏಪ್ರಿಲ್ 6 ರಂದು ನಡೆದ ದಂಪತಿಗಳ ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರಿಗೆ ಶಾಲು ಹಾಕಿ ಗೌರವಿಸಲಾಯಿತು.

ದಲಿತ್ ಸೇವಾ ಸಮಿತಿಯು ಸ್ಥಾಪನೆಗೊಂಡ ದಿನದಿಂದಲೂ ಇಂತಹ ನೂರಾರು ಬಡ ಕುಟುಂಬ ಗಳಿಗೆ ಆಶ್ರಯ ಮತ್ತು ನ್ಯಾಯ ಒದಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಂಘಟನೆಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಯು. ವಿಟ್ಲ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Share News