• Home  
  • ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಜು.27ರಂದು ನೀರುಮಾರ್ಗ ಪಡು ಬದಿನಡಿ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ
- DAKSHINA KANNADA - HOME

ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಜು.27ರಂದು ನೀರುಮಾರ್ಗ ಪಡು ಬದಿನಡಿ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ

ಮಂಗಳೂರು ಜುಲೈ 25 :ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಹಾಗೂ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಸಹಭಾಗಿತ್ವದಲ್ಲಿ ಪತ್ರಕರ್ತರ ತಾಲೂಕು ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಜು.27ರಂದು ನೀರುಮಾರ್ಗ ಪಡು ಬದಿನಡಿ ಸಮೀಪದ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಹಿರಿಯ ವಿಡಿಯೋ ಜರ್ನಲಿಸ್ಟ್ ದಿ. ನಾಗೇಶ್ ಪಡು ವೇದಿಕೆಯಲ್ಲಿ ಬೆಳಗ್ಗೆ 9.45ಕ್ಕೆ ಕಾರ್ಯಕ್ರಮ ಆಂಭವಾಗಲಿದ್ದು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ.
*ನಾನಾ ಸ್ಪರ್ಧೆಗಳು:* ಮಾನ್ಸೂನ್ ಸಂಭ್ರಮದಲ್ಲಿ 100ಮೀಟರ್ ಓಟ, ತೆಂಗಿನಕಾಯಿ ಬಿಸಾಡುವುದು, ಓಟ-ಸುತ್ತಾಟ, ಚೆಂಡಾಟ, ಮಡಕೆ ಒಡೆಯುವುದು, ಹಾಳೆ ಓಟ, ತಪ್ಪಂಗಾಯಿ, ನಿಧಿಹುಡುಕಾಟ, ಹಗ್ಗ-ಜಗ್ಗಾಟ, ಪಾಸಿಂಗ್ ಬಾಲ್, ಪಿಲಿನಲಿಕೆ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಲಿದೆ.
*ತುಳುನಾಡಿನ ತಿಂಡಿ-ತಿನಸುಗಳು*
ಬೆಳಗ್ಗಿನಿಂದ ಊಟೋಪಚಾರದಲ್ಲಿ ಪತ್ರೊಡೆ, ಪೆಲಕಾಯಿ ಗಟ್ಟಿ, ಪದೆಂಗಿ ನೀರು, ಹಲಸಿನ ರಚ್ಚೆ ಚಟ್ನಿ, ಹುರುಳಿ ಚಟ್ನಿ, ತೊಜಂಕ್-ಹಲಸಿನ ಬೀಜ ಪಲ್ಯ, ಚಿಕನ್ ಸುಕ್ಕ, ಒಣಮೀನು ಗಸಿ, ರಾಗಿ ಕಷಾಯ ಸೇರಿದಂತೆ ತುಳುನಾಡಿನ ತಿಂಡಿ-ತಿನಸುಗಳು, ಖಾದ್ಯಗಳು, ಪಾನಿಯದ ವ್ಯವಸ್ಥೆ ಮಾಡಲಾಗಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678