ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಇದರ ವತಿಯಿಂದ ಸಾಮಾಜಿಕ ಕಾಳಜಿಯ ಭಾಗವಾಗಿ, ವಿಟ್ಲದ ದ.ಕ.ಜಿ.ಪಂ. ಮಾದರಿ ಶಾಲೆಯ ಅಭಿವೃದ್ಧಿಗಾಗಿ ರೂ. 2,500/- ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಮಾ 18 ರಂದು ನಡೆದ ಈ ಕಾರ್ಯಕ್ರಮವು ಸಂಘಟನೆಯ ಸ್ಥಾಪಕಾಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೇಡ್ರಕಾಡು ಮತ್ತು ಜಿಲ್ಲಾಧ್ಯಕ್ಷರಾದ ಗೋಪಾಲ್ ನೇರಳಕಟ್ಟೆ ಅವರ ನೇತೃತ್ವದಲ್ಲಿ ಜರುಗಿತು. ಶಾಲೆಯ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಸಂಘದ ವತಿಯಿಂದ ನೀಡಲಾದ ಈ ಮೊತ್ತವನ್ನು ಶಾಲೆಯ ಶಿಕ್ಷಕಿಯವರಿಗೆ ಹಸ್ತಾಂತರಿಸಲಾಯಿತು.

