• Home  
  • ಕಡಬ: ಪೋಲ್ಯಾಂಡ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ದಂಪತಿಯಿಂದ ₹ 5 ಲಕ್ಷ ದೋಖಾ
- DAKSHINA KANNADA - HOME - LATEST NEWS

ಕಡಬ: ಪೋಲ್ಯಾಂಡ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ದಂಪತಿಯಿಂದ ₹ 5 ಲಕ್ಷ ದೋಖಾ

ಕಡಬ: ಪೋಲೆಂಡ್ ದೇಶದಲ್ಲಿ ಉದ್ಯೋಗ ವೀಸಾ ಕಲ್ಪಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.50 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ದಂಪತಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ  ಮನೋಜ್ ಎಂಬುವವರು ವಿದೇಶದಲ್ಲಿ ಉದ್ಯೋಗ ಹುಡುಕುತ್ತಿದ್ದರು. ಈ ವೇಳೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿದೆ. ಈ ವೇಳೆ “ಪೋಲೆಂಡ್ […]

Share News

ಕಡಬ: ಪೋಲೆಂಡ್ ದೇಶದಲ್ಲಿ ಉದ್ಯೋಗ ವೀಸಾ ಕಲ್ಪಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.50 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ದಂಪತಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ  ಮನೋಜ್ ಎಂಬುವವರು ವಿದೇಶದಲ್ಲಿ ಉದ್ಯೋಗ ಹುಡುಕುತ್ತಿದ್ದರು. ಈ ವೇಳೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿದೆ. ಈ ವೇಳೆ “ಪೋಲೆಂಡ್ ದೇಶದಲ್ಲಿ ನಮಗೆ ಉತ್ತಮ ಸಂಪರ್ಕವಿದ್ದು, ವೀಸಾ ನೀಡುವ ಅಧಿಕಾರಿಗಳ ಪರಿಚಯವೂ ಇದೆ. ಸುಮಾರು ಆರು ತಿಂಗಳಲ್ಲಿ ಕೆಲಸದ ವೀಸಾ ದೊರೆಯುತ್ತದೆ” ಎಂದು ಭರವಸೆ ನೀಡಿದ್ದರು.

ಇದಕ್ಕಾಗಿ ಸುಮಾರು 5 ಲಕ್ಷ ರೂ. ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಅದರಂತೆ ಮನೋಜ್‌ನನ್ನು ನಂಬಿಸಲು, ಪರಂಬಿಲ್ ಜೋಸೆಫ್ ಮನೋಜ್ ಅವರು ತಮ್ಮ ಮೊಬೈಲ್‌ನಲ್ಲಿ ಬಂದಿದ್ದ ಕೆಲ ಸಂದೇಶಗಳನ್ನು ತೋರಿಸಿದ್ದಾರೆ.  ನಂತರ ತಕ್ಷಣ 1 ಲಕ್ಷ ರೂ. ಹಾಗೂ ಹಂತ ಹಂತವಾಗಿ ಉಳಿದ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ಮನೋಜ್‌ ಹಣವನ್ನು ನೀಡಿದ್ದಾನೆ.

ಪ್ರತಿಬಾರಿಯೂ “ವೀಸಾ ಅರ್ಜಿ ಪ್ರಗತಿಯಲ್ಲಿದೆ” ಎಂದು ಆರೋಪಿಗಳು ಮನೋಜ್‌ನನ್ನು ನಂಬಿಸುತ್ತಿದ್ದರು. 2023ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ವೀಸಾ ಅರ್ಜಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿ, ಮುಂಬೈನಲ್ಲಿ ನಡೆಯುವ ಸಂದರ್ಶನಕ್ಕಾಗಿ ಮತ್ತೆ 1 ಲಕ್ಷ ರೂ ಹಣವನ್ನು ನಗದು ರೂಪದಲ್ಲಿ ಸ್ಮಿತಾ ಮನೋಜ್ ಅವರಿಗೆ ನೀಡುವಂತೆ ಹೇಳಿದ್ದಾರೆ. ಅದರಂತೆ, ಮನೋಜ್‌ ಹಣ ನೀಡಿದ್ದಾರೆ. ಈ ಮೂಲಕ ಒಟ್ಟು 4.50 ಲಕ್ಷ ರೂ. ಹಣ ಆರೋಪಿತರ ಕೈ ಸೇರಿದೆ.

09-01-2024 ರಂದು ಮನೋಜ್‌ ಸಂದರ್ಶನಕ್ಕೆ ಮುಂಬೈಗೆ ತೆರಳಿದಾಗ, ತಮ್ಮ ವೀಸಾಕ್ಕೆ ಯಾವುದೇ ಅರ್ಜಿಯೇ ಸಲ್ಲಿಸಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ನಂತರ ಆರೋಪಿಗಳನ್ನು ಸಂಪರ್ಕಿಸಿದಾಗ,  ಅವರು ಗೊಂದಲದ ಉತ್ತರ ನೀಡಿ, ಹಣವನ್ನು 2025ರ ಡಿಸೆಂಬರ್ ಕೊನೆಯ ವಾರದಲ್ಲಿ ವಾಪಸು ಕೊಡುತ್ತೇವೆ ಎಂದು ಕಾಲಹರಣ ಮಾಡಿದ್ದಾರೆ.

2026ರ ಜನವರಿ ಎರಡನೇ ವಾರದಲ್ಲಿ ಮತ್ತೆ ಸಂಪರ್ಕಿಸಲು ಯತ್ನಿಸಿದಾಗ, ಪರಂಬಲ್ ಜೋಸೆಫ್ ಮನೋಜ್ ಸಂಪರ್ಕಕ್ಕೆ ಸಿಗದೇ ಇದ್ದಾಗ ಆತನ ಪತ್ನಿ ಸ್ಮಿತಾ ಮನೋಜ್ ಬಳಿ ಹಣ ಕೇಳಿದಾಗ ಹಣ ನೀಡುವುದನ್ನು ನಿರಾಕರಿಸಿ, “ಹಣ ಕೇಳಿದರೆ ಮಾನಹಾನಿ ಮೊಕದ್ದಮೆ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News