canaratvnews

ಜೆಪ್ಪು ಮಹಾಕಾಳಿಪಡ್ಡು ರೈಲ್ವೆ ಅಂಡ‌ರ್ ಬ್ರಿಡ್ಜ್ ವಿಳಂಬ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, : ಜೆಪ್ಪು ಮಹಾಕಾಳಿಪಡ್ಡು ರೈಲ್ವೆ ಅಂಡರ್ ಬಿಡ್‌ ನ್ನು 30 ದಿನದೊಳಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸದಿದ್ದರೆ ಸಾರ್ವಜನಿಕರಿಂದಲೇ ಉದ್ಘಾಟನೆ ಮಾಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.

ಜೆಪ್ಪು ಮಹಾಕಾಳಿಪಡ್ಡು ಅಂಡರ್ ಬ್ರಿಡ್ಜ್ ಕಾಮಗಾರಿ ವಿಳಂಬವಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜೆಪ್ಪ ಮಹಾಕಾಳಿಪಡ್ಡು ರೈಲ್ವೆ ಅಂಡರ್‌ಬ್ರಿಡ್ಜ್ ಕಾಮಗಾರಿ ಯನ್ನು ಅವೈಜ್ಞಾನಿಕವಾಗಿ ನಡೆಸಿ ನಾಲ್ಕು ವರ್ಷಗಳಿಂದ ಸಾರ್ವ ಜನಿಕರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ನಾಲ್ಕು ವರ್ಷಗಳ ಹಿಂದೆ ಯು.ಟಿ.ಖಾದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸ್ಥಾರ್ಟ್ ಸಿಟಿಯ ಮೂಲಕ ರಾಜ್ಯ ಹೆದ್ದಾರಿಯಿಂದ ಮಂಗಳೂರಿಗೆ ಪ್ರವೇಶ ನಿ ರಿ ಮಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾದ ರಸ್ತೆಯ ಕಾಮಗಾರಿಯನ್ನು ಮಾಡಿದ್ದರೂ ಕೇವಲ ಒಂದು ಅಂಡರ್ ಬ್ರಿಡ್ಜ್ ಮಾಡಿಕೊಡಲು ಸಂಸದರಿಂದ ಹಾಗೂ ಶಾಸಕರಿಂದ ಸಾಧ್ಯವಾಗಿಲ್ಲ ಎಂಬುದು ದುರದೃಷ್ಟಹರ ವಿಚಾರ ಎಂದು ಐವನ್ ಟೀಕಿಸಿದರು.

ಜಿಲ್ಲಾ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಮಾಜಿ ಕಾರ್ಪೊರೇಟರ್ ಪ್ರವೀಣ್‌ಂದ್ರ ಆಳ್ವ, ಮಂಗಳೂರು ದಕ್ಷಿಣ ಬ್ಲಾಕ್ ಸಮಿತಿಯ ಅಧ್ಯಕ್ಷ ಅಬ್ದುಲ್ ಸಲೀಂ, ಪ್ರಮುಖರಾದ ಅಶ್ರಫ್ ಬಜಾಲ್, ನಾಗೇಂದ್ರ ಕುಮಾರ್, ಕವಿತಾ ವಾಸು, ವಿಜಯ ಲಕ್ಷ್ಮೀ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್‌ ಬಾಗ್, ಕಾಂಗ್ರೆಸ್ ನಾಯಕರಾದ ಶಾಹುಲ್ ಹಮೀದ್, ನವಾಝ್ ಜೆಪ್ಪು, ನೆಲ್ಸನ್ ರೊಚೆ, ಹೈದರ್, ಮನೀಶ್ ಬೋಳಾರ್, ಸೋಹನ್ ಎಸ್.ಕೆ., ಸುಧೀರ್ ಟಿ.ಕೆ., ಡೆನಿಸ್ ಡಿಸಿಲ್ವ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Share News
Exit mobile version