ಅಹಮದಾಬಾದ್: ಇಂದು ಮಧ್ಯಾಹ್ನ ನಡೆದ ವಿಮಾನ ಅಪಘಾತದಲ್ಲಿ ಮಂಗಳೂರು ಮೂಲದ ಸಹ ಪೈಲೆಟ್ ಕ್ಲೈವ್ ಕುಂದರ್ ಸಾವನ್ನಪ್ಪಿದ್ದಾರೆ.

ಕ್ಲೈವ್ ಕುಂದರ್ ಅವರು ಕ್ರೈಸ್ತ ಸಮುದಾಯದ ಪ್ರೊಟೆಸ್ಟೆಂಟ್ ಧರ್ಮಸಭೆಗೆ ಸೇರಿದವರಾಗಿದ್ದಾರೆ. ಮುಂಬೈನ ಸಂತ ಕ್ರೂಜ್ ಕಲೀನಾ ಧರ್ಮಸಭೆಗೆ ಸೇರಿದವರಾಗಿದ್ದಾರೆ. ಕ್ಲೈವ್ ಅವರ ತಾಯಿ ಮಂಗಳೂರು ಮೂಲದವರು ಎನ್ನಲಾಗಿದ್ದು, ಪ್ರಸ್ತುತ ಆಸ್ಟ್ರೇಲಿಯಾ ದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ. ಕ್ಲೈವ್ ಅವರ ತಾತನ ಮನೆ ಮಂಗಳೂರಿನಲ್ಲಿದ್ದು, ಅಲ್ಲಿ ಪ್ರಸ್ತುತ ಯಾರೂ ಇಲ್ಲ ಎನ್ನಲಾಗುತ್ತಿದೆ.