ಚಿಕ್ಕಬಳ್ಳಾಪುರ, ಡಿಸೆಂಬರ್ 22: ಕಿಲಾಡಿ ಪ್ರೇಮಿಗಳ ಜೋಡಿಯೊಂದು ಮೋಜು ಮಸ್ತಿ ಮಾಡಲು ಪರಿಚಯಸ್ಥ ಸ್ನೇಹಿತೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಲಕ್ಷಾಂತರ ರೂ ಹಣ ಪಡೆದು, ಕೆಲಸನ ಕೊಡದೆ, ವಾಪಸ್ ಹಣ ಕೂಡ ಕೊಡದೆ ಪಂಗನಾಮ ಹಾಕಿರುವಂತಹ ಘಟನೆವೊಂದು ಚಿಕ್ಕಬಳ್ಳಾಪುರ ತಾಲೂಕಿನ ಅಂಕಣಗುಂದಿ ಗ್ರಾಮದಲ್ಲಿ ನಡೆದಿದೆ.

ಬಾಯ್ ಫ್ರೆಂಡ್ ಜೊತೆ ಸೇರಿ ಸ್ನೇಹಿತೆಯರಿಗೆ ಪಂಗನಾಮ
ಚಿಕ್ಕಬಳ್ಳಾಪುರ ತಾಲೂಕಿನ ಅಂಕಣಗುಂದಿ ಗ್ರಾಮದ ನಿವಾಸಿ ಅನುಷಾ ಮತ್ತು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಿವಾಸಿಯಾಗಿರುವ ಆಕೆಯ ಬಾಯ್ ಫ್ರೆಂಡ್ ಅರುಣ್ ಜೊತೆ ಸೇರಿ, ತನಗೆ ಪರಿಚಯಸ್ಥ ಸ್ನೇಹಿತೆಯರಿಗೆ ಪಂಗನಾಮ ಹಾಕಿರುವ ಆರೋಪ ಕೇಳಿ ಬಂದಿದೆ. ತನ್ನ ಬಾಯ್ ಫ್ರೆಂಡ್ ಅರುಣ್ ಬೆಂಗಳೂರಿನ ಸಾಯಿ ಸೇಲ್ಪ್ ಡ್ರೈವ್ ಖಾಸಗಿ ಸಂಸ್ಥೆಯಲ್ಲಿ ಸಿಇಒ ಆಗಿದ್ದು, ಕೈ ತುಂಬಾ ಹಣ ಸಂಪಾದಿಸುವ ಕೆಲಸ ಕೊಡಿಸುತ್ತಾರೆ. ಅದಕ್ಕೆ ಹಣ ಕಟ್ಟಬೇಕು ಅಂತ ನಂಬಿಸಿ ಪರಿಚಯಸ್ಥರಿಂದಲೇ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ನಿವಾಸಿ ಎಲ್ಎಲ್ಬಿ ವಿದ್ಯಾರ್ಥಿನಿ ಪ್ರತಿಭಾ ಎನ್ನುವವರಿಗೆ ಒಂದು ಲಕ್ಷ 85 ಸಾವಿರ ರೂ., ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ ನಿವಾಸಿ ಎಂಸಿಎ ಪದವೀಧರೆ ಹರ್ಷಿತಾ ಎನ್ನುವವರಿಂದ 2 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ.
ಸ್ವತಃ ಅನುಷಾ ಹಣವನ್ನು ತನ್ನ ಖಾಖೆಗೆ ಹಾಕಿಸಿಕೊಂಡಿದ್ದು, ನಂತರ ಅರುಣ್ಗೆ ಕೊಟ್ಟಿರುವುದು ತಿಳಿದು ಬಂದಿದೆ. ಸದ್ಯಕ್ಕೆ ಪ್ರತಿಭಾ ಹಾಗೂ ಹರ್ಷಿತಾ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನುಷಾ, ವಾಪಸ್ ಹಣ ಕೇಳಿದ್ದಕ್ಕೆ ಅರುಣ್ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ಒಂದು ವಾರ ಸಮಯ ನೀಡಿ, ಅವನನ್ನು ಪೊಲೀಸ್ ಠಾಣೆಗೆ ಕರೆಸಿ ಹಣ ವಾಪಸ್ ಕೊಡಿಸುತ್ತೇನೆ ಅಂತ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾದ್ದಾ