ಮಂಗಳೂರು : ರಾಯಚೂರಿನಲ್ಲಿ ನಡೆದ 72ನೇ ಅಖಿಲ ಭಾರತ ಸರಕಾರಿ ಸಪ್ತಾಹ -2025 ರ ಕಾರ್ಯಕ್ರಮದಲ್ಲಿ ಶ್ರೀಮತಿ ಚಂಚಲ ತೇಜೋಮಯ ಅಧ್ಯಕ್ಷರು ಯಶಸ್ವಿನಿ ಶ್ರೀ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತ ಬಲ್ಮಠ ಮಂಗಳೂರು ಇವರನ್ನು ಶ್ರೇಷ್ಠ ಸಹಕಾರಿ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದು ಮೈಸೂರು ಪ್ರಾಂತ್ಯದಲ್ಲಿ ಪ್ರಥಮವಾಗಿ ಮಹಿಳೆಗೆ ಸಿಕ್ಕಿದ ಗೌರವವಾಗಿದೆ.

ಶ್ರೀಮತಿ ಚಂಚಲಾ ತೇಜೋಮಯ ಸುಮಾರು 25ವರ್ಷಗಳ ಹಿಂದೆ ಸರಕಾರಿ ಪ್ರಾಥಮಿಕ ಶಾಲೆ ಬಲ್ಮಠ ಇಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ತನ್ನ ಆತ್ಮೀಯ ಗೆಳತಿಯರೊಡನೆ ಸೇರಿಕೊಂಡು ಸುಮಾರು 7 ವರ್ಷಗಳ ಕಾಲ ಮಕ್ಕಳಿಗೆ ಉಚಿತ ಬಿಸಿಯೂಟವನ್ನು ನೀಡುವ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ ತದನಂತರ ಮಹಿಳೆಯರನ್ನು ಒಗ್ಗೂಡಿಸಿ 2002 ರಲ್ಲಿ ಯಶಸ್ವಿನಿ ಮಹಿಳಾ ಮಂಡಳಿಯನ್ನು ಸ್ಥಾಪನೆ ಮಾಡಿ ನಂತರ 2012 ರಲ್ಲಿ ಯಶಸ್ವಿನಿ ಚಾರಿಟೇಬಲ್ ಟ್ರಸ್ಟ್ ನ್ನು ರಚಿಸಿ ಸುಮಾರು 30 ಸ್ವಸಹಾಯ ಗುಂಪುಗಳ ರಚನೆಯನ್ನು ಮಾಡಿ ಮಹಿಳೆಯರು ಸ್ವಂತ ಉದ್ಯೋಗವನ್ನು ಮಾಡಲು ಅವಕಾಶವನ್ನು ಮಾಡಿಕೊಟ್ಟಿರುತ್ತಾರೆ.

ಪ್ರಸ್ತುತ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾಗಿ ಮಹಿಳೆಯರಿಗಾಗಿ ಉರ್ವ ಸ್ಟೋರ್ ನಲ್ಲಿ ಸುಮಾರು ಒಂದು ಕೋಟಿ ವೆಚ್ಚದ ಮಹಿಳಾಸೌಧ ಎಂಬ ಮೂರು ಅಂತಸ್ತಿನ ಕಟ್ಟಡದ ಕಾಮಗಾರಿಯನ್ನು ನಡೆಸುತ್ತಾ ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 1000 ಮಹಿಳೆಯರನ್ನು ಒಟ್ಟು ಸೇರಿಸಿ ಯಶಸ್ವಿನಿ ಶ್ರೀ ಮಹಿಳಾ ಸೌಹಾರ್ದ ಸಹಕಾರಿಯ ನ್ನು ಸ್ಥಾಪಿಸಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ ಎರಡೇ ವರ್ಷಗಳಲ್ಲಿ ಡಿವಿಡೆಂಟ್ ನೀಡಿದ ಕೀರ್ತಿಯು ಇವರದಾಗಿದೆ..ಮಹಿಳೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ
ಮಂಗಳೂರು ವಿಶ್ವವಿದ್ಯಾನಿಲಯದ sexual harassment atwork place ಸರಕಾರರೇತರ ಸದಸ್ಯರಾಗಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾಗಿ ನಗರದಲ್ಲಿ ಪ್ರಪ್ರಥಮವಾಗಿ ಮಹಿಳಾ ವಾಹನ ಜಾಥವನ್ನು ಮಾಡಿದ ಹಿರಿಮೆಯೂ ಇವರದಾಗಿದೆ
ಕರ್ನಾಟಕ ಜಾನಪದ ಪರಿಷತ್ತು ಮಂಗಳೂರು ತಾಲೂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ಚಂಚಲಾ ತೇಜೋಮಯ ಇವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ* ಇದು ಮೈಸೂರು ಪ್ರಾಂತ್ಯದಲ್ಲಿ ಪ್ರಥಮವಾಗಿ ಮಹಿಳೆಗೆ ಸಿಕ್ಕಿದ ಗೌರವವಾಗಿದೆ


