• Home  
  • ಅಸೈಗೋಳಿಯ ಕ್ಸೇವಿಯರ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ
- HOME - LATEST NEWS

ಅಸೈಗೋಳಿಯ ಕ್ಸೇವಿಯರ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

ಮಂಗಳೂರು: ಮಂಗಳೂರಿನ ಹೊರವಲಯದ ಅಸೈಗೋಳಿಯಲ್ಲಿರುವ ಕ್ಸೇವಿಯರ್ ಕೈಗಾರಿಕಾ ತರಬೇತಿ ಸಂಸ್ಥೆಯ ಲ್ಲಿ ಜೂ. 9ರಂದು ಸೋಮವಾರ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವು ಕ್ಸೇವಿಯರ್ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಂಡಿಯನ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಮುರಳಿ ಅವರು, ಮಕ್ಕಳು ಮುಂದಿನ ಭವಿಷ್ಯದಲ್ಲಿ ಸಮಾಜದಲ್ಲಿ ಜೀವಿಸುವಾಗ ಜೀವನವನ್ನು ಹೇಗೆ ರೂಪಿಸಬೇಕು? ಹೆತ್ತವರಿಗೆ ಹಾಗೂ ಸಮಾಜಕ್ಕೆ ಹೇಗೆ ಮಾದರಿಯಾಗಿ ಬಾಳಬೇಕು ಮತ್ತು ವಿದ್ಯಾಭ್ಯಾಸದ ನಂತರ ಉದ್ಯೋಗವನ್ನು ಪಡೆಯುವುದರ […]

Share News

ಮಂಗಳೂರು: ಮಂಗಳೂರಿನ ಹೊರವಲಯದ ಅಸೈಗೋಳಿಯಲ್ಲಿರುವ ಕ್ಸೇವಿಯರ್ ಕೈಗಾರಿಕಾ ತರಬೇತಿ ಸಂಸ್ಥೆಯ

ಲ್ಲಿ ಜೂ. 9ರಂದು ಸೋಮವಾರ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವು ಕ್ಸೇವಿಯರ್ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಂಡಿಯನ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಮುರಳಿ ಅವರು, ಮಕ್ಕಳು ಮುಂದಿನ ಭವಿಷ್ಯದಲ್ಲಿ ಸಮಾಜದಲ್ಲಿ ಜೀವಿಸುವಾಗ ಜೀವನವನ್ನು ಹೇಗೆ ರೂಪಿಸಬೇಕು? ಹೆತ್ತವರಿಗೆ ಹಾಗೂ ಸಮಾಜಕ್ಕೆ ಹೇಗೆ ಮಾದರಿಯಾಗಿ ಬಾಳಬೇಕು ಮತ್ತು ವಿದ್ಯಾಭ್ಯಾಸದ ನಂತರ ಉದ್ಯೋಗವನ್ನು ಪಡೆಯುವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಸೇವಿಯರ್ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಮಾತನಾಡಿ, “ವಿದ್ಯಾಭ್ಯಾಸವನ್ನು ಪಡೆದ ನಂತರ ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ವಿಧೇಯರಾಗಿ ನಡೆಯಬೇಕು? ಕಲಿತ ಶಾಲೆಯನ್ನು ಯಾವುದೇ ಹುದ್ದೆಯಲ್ಲಿದ್ದರೂ ಹೆತ್ತ ತಾಯಿಯನ್ನು ಮರೆಯದ ಹಾಗೆ ಮರೆಯಬಾರದು ಎಂದು ಹಿತ ನುಡಿಗಳನ್ನು ಹೇಳಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮ್ಯಾಕ್ಸಿಂ ಫೆರ್ನಾಂಡಿಸ್, ಸಂತೋಷ್ ಡಿಸೋಜ, ಎಲಿಯಾಸ್ ಡಿಸೋಜ, ಜೋನ್ ಡಿಸೋಜ ಸಂಸ್ಥೆಯ ಪ್ರಾಂಶುಪಾಲ ಸುಧೀರ್ ರಾಜ್ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಸುಧೀರ್ ರಾಜ್ ಕೋಟ್ಯಾನ್ ಸ್ವಾಗತಿಸಿ, ಶಿವಾನಂದ್ ಜೆ.ಟಿ.ಓ. ನಿರೂಪಿಸಿದರು.

Share News