canaratvnews

ಟೈ ಎಲೈಟ್ ಗಾಗಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಮತ್ತು ದ ಇಂಡಸ್ ಎಂಟರ್ ಪ್ರೈಸಸ್ (ಟೈ ) ಶೈಕ್ಷಣಿಕ ಒಪ್ಪಂದ

ಮಂಗಳೂರು: ದ ಇಂಡಸ್ ಎಂಟರ್ ಪ್ರೈಸಸ್ (ಟೈ )ಮಂಗಳೂರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಜಂಟಿಯಾಗಿ ಟೈ ಎಲೈಟ್ ಕಾರ್ಯಕ್ರಮ ಸಂಯೋಜಿಸಲು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಶೈಕ್ಷಣಿಕ ಮತ್ತು ಉದ್ಯಮರಂಗದ ನಡುವಿನ ಅಂತರ ನಿವಾರಿಸುವ ಹಾಗೂ ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಕೆನರಾ ಇಂಜಿನಿಯರಿಂಗ್ ಕಾಲೇಜು ಸಹಿತ ಕೆನರಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿ, ನಾಯಕತ್ವ, ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂಬಂತೆ ಕಳೆದ ಶುಕ್ರವಾರ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಒಪ್ಪಂದದಂತೆ ದ ಇಂಡಸ್ ಎಂಟರ್ ಪ್ರೈಸಸ್ (ಟೈ ) ಸಂಸ್ಥೆಯು ಕೆನರಾ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ಪೂರಕವಾದ ಕಾರ್ಯಾಗಾರ, ಸ್ಟಾರ್ಟ್ ಅಪ್ ಪ್ರಮುಖರಿಂದ ಮಾರ್ಗದರ್ಶನ, ಬೋಧಕರ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು, ಇಂಟರ್ನ್ ಶಿಪ್ ಚಟುವಟಿಕೆಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವ ಬೆಳೆಸುವ , ಸಂಶೋಧನಾ ಚಟುವಟಿಕೆಗಳು, ಉದ್ಯಮಶೀಲ ಸಮುದಾಯವನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ.
ಒಪ್ಪಂದದ ಕುರಿತು ಮಾತನಾಡಿದ ಎರಡೂ ಸಂಸ್ಥೆಯ ಪ್ರಮುಖರು ಯುವ ಸಮೂಹದಲ್ಲಿ ಉದ್ಯಮಶೀಲತೆಯ ಪರಿಚಯದೊಂದಿಗೆ ಅನುಭವದ ಕಲಿಕೆಯನ್ನು ನೀಡುವ ಆಶಯ ಈ ಕಾರ್ಯಕ್ರಮದ್ದಾಗಿದೆ ಎಂದರು. ಮಂಗಳೂರು ಉಡುಪಿ ವಲಯದಲ್ಲಿನ ಅನ್ವೇಷಣೆಯ ಉತ್ಸಾಹೀ ಯುವ ಸಮೂಹನ್ನು ಪ್ರೋತ್ಸಾಹಿಸಿ ಸಿಲಿಕಾನ್ ಬೀಚ್ ನಿರ್ಮಿಸುವ ಆಶಯದೊಂದಿಗೆ ಈಗಾಗಲೇದ ಇಂಡಸ್ ಎಂಟರ್ ಪ್ರೈಸಸ್ (ಟೈ ) ಕಾರ್ಯನಿರತವಾಗಿದೆ.

Share News
Exit mobile version