• Home  
  • ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ.
- DAKSHINA KANNADA - HOME - LATEST NEWS

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಇದರ ವತಿಯಿಂದ ಮಂಗಳೂರು ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ದಿನೇಶ್ ಮುಳೂರುರವರ ಅಧ್ಯಕ್ಷತೆಯಲ್ಲಿ ಜರುಗಿತು.


ಕಾರ್ಯಕ್ರಮವನ್ನು ಕರ್ಣಾಟಕ ಸರ್ಕಾರದ ಮಾಜಿ ಸಚಿವಾರಾದ ಶ್ರೀ ಬಿ ರಮಾನಾಥ ರೈವರು ದೀಪ ಬೆಳಗಿಸಿ ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ ರವರ ತತ್ವ ಆದರ್ಶವನ್ನು ಪಾಲಿಸಿಕೊಂಡು ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಭವಿಷ್ಯದಲ್ಲಿ ಶೋಷಿತ ವಿಧ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೋತ್ಸಾಹಿಸಲು ಹಾಗೂ ಇನ್ನಷ್ಟು ಮುಖ್ಯವಾಹಿನಿಗೆ ತರುವಂತಹ ಕಾರ್ಯಕ್ರಮವಾಗಿದೆ, ಭವಿಷ್ಯದ ಚಿಂತನೆಯಲ್ಲಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾಧ್ಯಕರಾದ ದಿನೇಶ್ ಮುಳೂರು ರವರ ಈ ಒಂದು ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆ ಹಾಗೂ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲರವರು ಮಾತನಾಡಿ ಪುಸ್ತಕ ಸ್ವೀಕರಿಸಿದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷರಾದ ದಿನೇಶ್ ಮುಳೂರುರವರು ಮಾತನಾಡಿ “ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಹುಲಿಯ ಹಾಲನ್ನು ಕುಡಿದವನು ಗರ್ಜಿಸಲೇಬೇಕು” ಎಂಬ ಡಾ. ಬಿ. ಆರ್ ಅಂಬೇಡ್ಕರರವರ ಮಾತನ್ನು ವಿದ್ಯಾರ್ಥಿಗಳಿಗೆ ಪುನರುಚ್ಚರಿಸುವ ಮೂಲಕ ಶಿಕ್ಷಣದ ಮಹತ್ವನ್ನು ತಿಳಿಸಿದರು. ವಿಧ್ಯಾರ್ಥಿಗಳು ಯಾವುದೇ ಬಾಹ್ಯ ಶಕ್ತಿಗಳ ಪ್ರಚೋದನೆಗಳಿಗೆ ಬಲಿಯಾಗದೆ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವು ತೋರಬೇಕು ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಉಸ್ತುವಾರಿಯಾಗಿರುವ ಟಿ.ಹೊನ್ನಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಶ್ರೀಮತಿ ಶಾಂತಲ ಗಟ್ಟಿ, ವಿಕಾಸ್ ಶೆಟ್ಟಿ, ಪ್ರೇಮ್ ಬಲ್ಲಾಳ್ ಭಾಗ್ ಸತೀಶ್ ಪೆಂಗಲ್, ನಾಗವೇಣಿ, ಸರೋಜಿನಿ ಮಂಜನಾಡಿ , ಬ್ಲಾಕ್ ಅಧ್ಯಕ್ಷರುಗಳಾದ, ದಿನೇಶ್ ಬಲಿಪತೋಟ, ನಾಗೇಶ್ ಪಿ.ಏಸ್ ಪೋಲೀಸ್ ಲೈನ್, ಪ್ರಕಾಶ್ ಕೋಡಿಕಲ್, ನೇಮಿರಾಜ್ ಬೆಳ್ತಂಗಡಿ. ಅಕ್ರಮ ಸಕ್ರಮ ಸದಸ್ಯರಾದ ರಾಮಣ್ಣ ಪಿಲಿಂಜ, ಕಾಂಗ್ರೆಸ್ ಮುಖಂಡರುಗಳಾದ, ಅಭಿಷೇಕ್ ಪಿ. ಎಸ್., ಇಂದಿರಾ ನಾಗೇಶ್ ಚಂದ್ರಿಕಾ ತಣ್ಣೀರು ಬಾವಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರೇಮ್ ಬಲ್ಲಾಳ್ ಭಾಗ್ ಸ್ವಾಗತಿಸಿ, ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು ಕೊನೆಗೆ ಕಾರ್ಯದರ್ಶಿಯಾದ ರವಿ ಸುಂಕದಕಟ್ಟೆ ಧನ್ಯವಾದ ಸಲ್ಲಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678