canaratvnews

ನ. 5: ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರ ಪಟ್ಟಾಭಿಷೇಕ, ಅಧಿಕಾರ ಸ್ವೀಕಾರ

ಬೆಳ್ತಂಗಡಿ, ನ. 2: ಧರ್ಮಪ್ರಾಂತ್ಯದ ಧ’ ರ್ವಾಧ್ಯಕ್ಷರಾಗಿ ನಿಯೋಜಿತರಾದ ಅತೀ ವಂ। ಎರಡನೇ ಜೇಮ್ಸ್ ಪಟೇರಿಲ್ ಅವರ ಪಟ್ಟಾಭಿಷೇಕ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ನ. 5 ರಂದು ಸಂತ ಲಾರೆನ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆಯಲಿದೆ.

ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾಧ್ಯಮ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಫಾ| ಸುನೀಲ್ ಐಸಾಕ್ ಜ್ಞಾನ ನಿಲಯದಲ್ಲಿ ಸೋಮವಾರ ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿ, ಸಿರೋ ಮಲಬಾರ್‌ಕಥೋಲಿಕರಿಗಾಗಿ ಆರಂಭಗೊಂಡ ಈ ಧರ್ಮಪ್ರಾಂತ್ಯದ ಮೊದಲ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಪ್ರಸ್ತುತ ನಿವೃತ್ತಗೊಳ್ಳುತ್ತಿದ್ದಾರೆ. ಅವರ ಸ್ಥಾನಕ್ಕೆ ಬೆಳ್ತಂಗಡಿ ಮೂಲದವರೇ ಆದ ಅತೀ ವಂ। ಜೇಮ್ಸ್ ಪಟ್ಟೇರಿಲ್ ಅವರು ನಿಯೋಜಿತರಾಗಿದ್ದಾರೆ. ಬೆಳವಣಿಗೆಗೆ ಬಿಷಪ್ ಲಾರೆನ್ಸ್ ಮುಕ್ಕುಯಿಯವರ ಕೊಡುಗೆ ಅಪಾರ: ದ.ಕ. ಕೊಡಗು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು. ಸಮುದಾಯ ಅಭಿವೃದ್ಧಿಗಾಗಿ ಅವರು ವಿಶೇಷವಾಗಿ ಶ್ರಮಿಸಿದ್ದಾರೆ ಎಂದರು.

‘ನ. 5 ರ ಬೆಳಗ್ಗೆ 8.15ಕ್ಕೆ ಧರ್ಮಾಧ್ಯಕ್ಷರಿಗೆ ಸ್ವಾಗತ. 8.30 ಕ್ಕೆ ದೇಶದ ವಿವಿಧ ಭಾಗದ ಧರ್ಮಾಧ್ಯಕ್ಷರುಗಳು, ಧರ್ಮಗುರುಗಳ ವಿಧಿ ವಿಧಾನಗಳಿಗಾಗಿ ಮೆರವಣಿಗೆ, 9 ಕ್ಕೆ ಧರ್ಮಾಧ್ಯಕ್ಷರ ದೀಕ್ಷೆ 11 ಕ್ಕೆ ಅಧಿಕಾರ ಹಸ್ತಾಂತರ, ಪದಗ್ರಹಣ, 12.30 ಕ್ಕೆ ಸಾರ್ವಜನಿಕ ಸಮ್ಮೇಳನ ಹಾಗೂ ಸಮಾರಂಭದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.

ಪಟ್ಟಾಭಿಷೇಕ ಸಮಾರಂಭ ಸಿರೋ ಮಲಬಾರ್‌ಧರ್ಮ ಸಭೆಯ ಮಹಾಧರ್ಮಾಧ್ಯಕ್ಷ ಅತಿ ವಂ| ರಾಫೇಲ್ ತಟ್ಟಿಲ್ ಶುಭಾಶೀರ್ವಾದ ನೀಡುವರು. ತಲಚೇರಿ ಆರ್ಚ್ ಬಿಷಪ್ ಡಾ| ಜೋಸೆಫ್ ಪಾಮ್ನಾನಿ, ಬೆಂಗಳೂರಿನ ಆರ್ಚ್ ಬಿಷಪ್ ಡಾ| ಪೀಟರ್‌ಮಚಾಡೋ, ಕಾಥೋಲಿಕ್ಸ್ ಬಿಷಪ್ಸ್ ಕ್ಯಾನರೆನ್ಸ್ ಆಫ್ ಇಂಡಿಯಾದ ಅಧ್ಯಕ್ಷ ಮಾರ್‌ ಆಂಡ್ರಸ್ ತಾಯತ್ತು, ಅಪೋಸ್ಟೋಲಿಕ್ ನುಸ್ಸಿಯೊ ಉಪಮುಖ್ಯಸ್ಥರೆ! ಆ್ಯಂಡ್ರಿಯಾ ಫ್ರಾನ್ಸಿಸ್, ರೋಮ್ ಕ್ಲಾರೆಟಿಯನ್ಸ್ ಸುಪೀರಿಯರ್ ಜನರಲ್ ರೆ|ಫಾ| ಮ್ಯಾಥ್ಯು ವಟ್ಟಮಟ್ಟಮ್ ಸೇರಿದಂತೆ ದೇಶದ ವಿವಿಧ ಭಾಗಗಳ 40 ಕ್ಕೂ ಅಧಿಕ ಧರ್ಮಾಧ್ಯಕ್ಷರು, 250 ಕ್ಕೂ ಅಧಿಕ ಧರ್ಮಗುರುಗಳು, ಧರ್ಮಭಗಿನಿಯರು ಪಾಲ್ಗೊಳ್ಳುವರು ಎಂದರು.

ಕಾರ್ಯಕ್ರಮ ಸಂಯೋಜಕ ವಿಕಾರ್ ಜನರಲ್ ಜೋಸೆಫ್ ವಲೈಯಪರಂಬಿಲ್, ಮಾಧ್ಯಮ ಸಮಿತಿಯ ಸದಸ್ಯರಾದ ಜೈಸನ್ ಪಟ್ಟೇರಿ, ಐವಾನ್, ಆಲ್ವಿನ್ ಉಪಸ್ಥಿತರಿದ್ದರು.

Share News
Exit mobile version