canaratvnews

ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ದಿ ಪಡೆದಿದ್ದ ಬ್ಯಾಷ್ಠಿಸ್ಟ್ ಡಿ’ಕುನ್ಹಾ ನಿಧನ

ಮಂಗಳೂರು ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ 21, ಮೇ 2025 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ, ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.


ಐವತ್ತು ದಶಕಗಳ ಹಿಂದೆಯೇ ಸುಮಾರು 37 ಧರ್ನಶಿಶು (ಮಕ್ಕಳ ಪೋಷಕತ್ವ) ಹೊಂದಿ ಹಿತಪೋಷಕರೆಣಿಸಿ ಶ್ರೇಷ್ಠವ್ಯಕ್ತಿವೆಂದೇ ಗುರುತಿಸಿ ಜನಾನುರಾಗಿದ್ದರು. ಬಳಿಕ ಬಂಟ್ವಾಳ ಮೊಡಂಕಾಪು ಇಲ್ಲಿನ ಇನ್ಫೆoಟ್ ಜೀಸಸ್ ಚರ್ಚ್ ನಲ್ಲಿ ಪಾಲನಾ ಸಮಿತಿ ಸದಸ್ಯರಾಗಿ, ತಿಸ್ರಿ ಒಡ್ದ್ ಇದರ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಇದರ ಸಕ್ರಿಯ ಸದಸ್ಯರಾಗಿ, ಕೊಡುಗೈದಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸದ್ಯ ಮಂಗಳೂರು ಬಿಕರ್ಣಕಟ್ಟೆ ಇಲ್ಲಿನ ಜಯಶ್ರೀಗೇಟ್ ಸ್ವನಿವಾಸದಲ್ಲಿ ನೆಲೆಸಿದ್ದರು.


ಮೃತರು ಪತ್ನಿ, ಇಬ್ಬರು ಸುಪುತ್ರಿಯರು, ಮೂವರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Share News
Exit mobile version