• Home  
  • ಬಂಟ್ವಾಳ: ಅಬ್ದುಲ್‌ ಕೊಲೆ ಪ್ರಕರಣ- ಸ್ಪೀಕರ್‌ ಯು.ಟಿ ಖಾದರ್‌ ಖಂಡನೆ
- DAKSHINA KANNADA - HOME - LATEST NEWS

ಬಂಟ್ವಾಳ: ಅಬ್ದುಲ್‌ ಕೊಲೆ ಪ್ರಕರಣ- ಸ್ಪೀಕರ್‌ ಯು.ಟಿ ಖಾದರ್‌ ಖಂಡನೆ

ಬಂಟ್ವಾಳ: ಕೊಳತ್ತಮಜಲು ಬಳಿ ಇಬ್ಬರು ಮುಸ್ಲಿಂ ಯುವಕರ ಹಲ್ಲೆ ನಡೆಸಿದ ಪರಿಣಾಮ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆಯನ್ನು ಪವಿತ್ರ ಮದೀನಾದಲ್ಲಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಬಲವಾಗಿ ಖಂಡಿಸಿದ್ದಾರೆ. ಕಳೆದ ಹಲವಾರು ದಿವಸಗಳಿಂದ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ರೌಡಿಗಳು,ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ,ಇಲಾಖೆ ನಿರ್ಲಕ್ಷ್ಯತನ ವಹಿಸಿರುವುದೇ ಮತ್ತೆ ಅಹಿತಕರ ಘಟನೆ ಮರುಕಳಿಸಲು ಕಾರಣವಾಗಿರಬಹುದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ಇನ್ನಾದರೂ ಈ […]

Share News

ಬಂಟ್ವಾಳ: ಕೊಳತ್ತಮಜಲು ಬಳಿ ಇಬ್ಬರು ಮುಸ್ಲಿಂ ಯುವಕರ ಹಲ್ಲೆ ನಡೆಸಿದ ಪರಿಣಾಮ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆಯನ್ನು ಪವಿತ್ರ ಮದೀನಾದಲ್ಲಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಬಲವಾಗಿ ಖಂಡಿಸಿದ್ದಾರೆ.

ಕಳೆದ ಹಲವಾರು ದಿವಸಗಳಿಂದ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ರೌಡಿಗಳು,ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ,ಇಲಾಖೆ ನಿರ್ಲಕ್ಷ್ಯತನ ವಹಿಸಿರುವುದೇ ಮತ್ತೆ ಅಹಿತಕರ ಘಟನೆ ಮರುಕಳಿಸಲು ಕಾರಣವಾಗಿರಬಹುದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

ಇನ್ನಾದರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಇಲಾಖೆ ತಕ್ಷಣ ತಪ್ಪಿತಸ್ಥ ಗೂಂಡಾಗಳನ್ನು ಬಂಧಿಸುವಂತೆ ಹಾಗೂ ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ದ್ವೇಷ ಹುಟ್ಟುವಂತೆ ಪೋಸ್ಟ್ ಗಳನ್ನು ಹಾಕಿ ಸಮಾಜದ ಅಶಾಂತಿ ಕೆಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.

Share News