• Home  
  • ಫಾ. ಮೆಲ್ವಿನ್ ಪಿಂಟೋ ಅವರ ನಿಧನಕ್ಕೆ ಮಾಜಿ ಸಚಿವ ಬಿ. ರಾಮನಾಥ ರೈ ತೀವ್ರ ಸಂತಾಪ
- COMMUNITY NEWS - LATEST NEWS

ಫಾ. ಮೆಲ್ವಿನ್ ಪಿಂಟೋ ಅವರ ನಿಧನಕ್ಕೆ ಮಾಜಿ ಸಚಿವ ಬಿ. ರಾಮನಾಥ ರೈ ತೀವ್ರ ಸಂತಾಪ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ. ಮೆಲ್ವಿನ್ ಪಿಂಟೋ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಮಾಜಿ ಸಚಿವ ಬಿ.ರಾಮನಾಥ ರೈ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾ ರೆ .ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಶಿಕ್ಷಣ ಕ್ಷೇತ್ರಕ್ಕೆ ಫಾ. ಮೆಲ್ವಿನ್ ಪಿಂಟೋ ಅವರು ನೀಡಿದ ಸೇವೆ ಅಪಾರ ಹಾಗೂ ಅಮೂಲ್ಯವಾದುದು. ಅವರ ಸರಳತೆ, ಸಜ್ಜನಿಕೆ ಮತ್ತು ವಿದ್ಯಾರ್ಥಿಗಳ ಮೇಲಿನ ಅಪಾರ ಕಾಳಜಿ ಎಂದಿಗೂ ಮರೆಯಲಾಗದು. ಸಾವಿರಾರು […]

Share News

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ. ಮೆಲ್ವಿನ್ ಪಿಂಟೋ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಮಾಜಿ ಸಚಿವ ಬಿ.ರಾಮನಾಥ ರೈ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾ ರೆ .ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,

“ಶಿಕ್ಷಣ ಕ್ಷೇತ್ರಕ್ಕೆ ಫಾ. ಮೆಲ್ವಿನ್ ಪಿಂಟೋ ಅವರು ನೀಡಿದ ಸೇವೆ ಅಪಾರ ಹಾಗೂ ಅಮೂಲ್ಯವಾದುದು. ಅವರ ಸರಳತೆ, ಸಜ್ಜನಿಕೆ ಮತ್ತು ವಿದ್ಯಾರ್ಥಿಗಳ ಮೇಲಿನ ಅಪಾರ ಕಾಳಜಿ ಎಂದಿಗೂ ಮರೆಯಲಾಗದು. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದ ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಶಿಸ್ತುಬದ್ಧ ನಾಯಕತ್ವ ಮತ್ತು ಮಾನವೀಯ ಗುಣಗಳು ಸದಾ ಸ್ಮರಣೀಯ,” ಎಂದು ಗುಣಗಾನ ಮಾಡಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗ, ಅನುಯಾಯಿಗಳು ಮತ್ತು ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Share News