HOMELATEST NEWS

ಪೆರುವಾಯಿ ಗ್ರಾಮದಲ್ಲಿ ₹1.40 ಕೋ. ವೆಚ್ಚದ 18 ಕಾಮಗಾರಿಗಳಿಗೆ ಶಾಸಕ ಅಶೋಕ್‌ ರೈ ಚಾಲನೆ

ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ 1.40 ಕೋ.ರೂಗಳ ಒಟ್ಟು 18 ವಿವಿಧ ಕಾಮಗಾರಿಗಳಿಗೆ ಸ್ಥಳೀಯ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಶಿಲನ್ಯಾಸ ನೆರವೇರಿಸಿದರು.

ಕಳೆದ 3 ವರ್ಷದಲ್ಲಿ ಈ ಗ್ರಾಮಕ್ಕೆ 2.88 ಕೋ.ರೂಗಳ ಅನುದಾನವನ್ನು ಕೊಟ್ಟಿದ್ದೇವೆ ಎಂದು ಶಾಸಕರು ಮಾಹಿತಿ ನೀಡಿದರು.

ಇದೇ ವೇಳೆ ” ಯಾರಿಗಾದರೂ ಅಕ್ರಮ-ಸಕ್ರಮ 94ಸಿ, 94ಸಿಸಿ ಇದ್ದರೆ ಕೊಡಿ ಅದನ್ನು ಮಾಡಿಸಿಕೊಡುತ್ತೇವೆ. ಮನೆ ಇಲ್ಲದವರಿಗೆ 3 ಸೆಂಟ್ಸ್‌ ಜಾಗವನ್ನು ಕೊಟ್ಟು 2 ಲಕ್ಷ ರೂ ಮನೆ ಕಟ್ಟಲು ಅನುದಾನ ನೀಡಲಾಗುವುದು. ಎನ್‌ಓಸಿ ಇಲ್ಲದೇ ವಿದ್ಯುತ್‌ ಸಂಪರ್ಕ ಮಾಡಿಕೊಡಲಾಗುವುದು ಎಂದು ಹೇಳಿದರು.

*ಪೆರುವಾಯಿ ಜಂಕ್ಷನ್ ಬಳಿ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ*

ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್ ಬಳಿ ಶಾಸಕ ಅಶೋಕ್ ರೈ ಅವರ ಅನುದಾನದಿಂದ ನೂತನ ರಿಕ್ಷಾ ತಂಗುದಾಣ ನಿರ್ಮಾಣವಾಗಿದ್ದು ಇದರ ಉದ್ಘಾಟನೆ ನೆರವೇರಿತು. ಈ ಭಾಗದ ರಿಕ್ಷಾ ಚಾಲಕರ ಬಹುಕಾಲದ ಬೇಡಿಕೆಯೂ ಇದಾಗಿತ್ತು.
ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿದರು‌ ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ MS ಮಹಮ್ಮದ್ ,ಡಿಸಿಸಿ ಪ್ರ.ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಇಂಟಕ ಅಧ್ಯಕ್ಷಜಯಪ್ರಕಾಶ್ ಬದಿನಾರು, ನ್ಯಾಯವಾದಿ ಭಾಸ್ಕರ ಪೆರುವಾಯಿ, ರಾಮಣ್ಣ ಪಿಲಿಂಜ, ಅಬ್ದಲ್ ಕರೀಂ ಕುದ್ದುಪದವು, ರಾಜೇಂದ್ರನಾಥ್ ರೈ, ನಫೀಸಾ ಪೆರುವಾಯಿ, ಶ್ರೀಧರ ಬಾಳೆಕಲ್ಲು, ರಶ್ಮಿ ಯಂ, ಸಮೀರ್ ಬದಿಯಾರು, ಬೂತ್ ಅಧ್ಯಕ್ಷರು: ಕೆ.ಮಹಮ್ಮದ್, ವಿನ್ಸೆಂಟ್ ಡಿಸೋಜ, ಗೋಪಾಲಕೃಷ್ಣ ನಾಯ್ಕ್, ರಂಜಿತ್ ಮಾರ್ಲ, ಸತೀಶ ಮಣಿಯಾಣಿ, ಶಾಫಿ ಸೇನೆರಪಾಲು ಜಯರಾಮ ಶೆಟ್ಟಿ ಬದಿಯಾರು, ಅಬ್ದುಲ್ಲ ಕಾನ, ಲಿಯೋ ಡಿಸೋಜ, G.S. ಕುಮಾರ್, ಅಶೋಕ್ ಡಿ ಸೋಜ ಮುಳ್ಳಚ್ಚಿ ಉಪಸ್ಥಿತರಿದ್ಧರು.

ಪೆರುವಾಯಿ ಗ್ರಾಮದ ಮುಚ್ಚಿರಪದವು- ಸೇಡಿಗುರಿ ರಸ್ತೆ ಅಭಿವೃದ್ದಿಗೆ 10 ಲಕ್ಷ ಅನುದಾನದಲ್ಲಿ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.

ಪೆರುವಾಯಿ ಗ್ರಾಮದ ಶ್ರೀ ಮೂವರ್ ದೈವಂಗಳ ಮಾಡ ದೈವಸ್ಥಾನದ ಅಭಿವೃದ್ದಿಗೆ 5 ಲಕ್ಷ ಅನುದಾನದಲ್ಲಿ ಶಿಲಾನ್ಯಾಸ ನಡೆಯಿತು.

ಪೆರುವಾಯಿ ಗ್ರಾಮದ ಮುಂಡಾಲೆ ರಸ್ತೆಗೆ ರೂ 10 ಲಕ್ಷ ಅನುದಾನದಲ್ಲಿ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.

ಪೆರುವಾಯಿ ಗ್ರಾಮದ ಅಶ್ವಥ್ಥನಗರ ಬಸ್ ನೂತನ ಬಸ್ ತಂಗುದಾಣವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.

ಪೆರುವಾಯಿ ಗ್ರಾಮದ ಅದೆಂಜಿಗುಳಿ ರಸ್ತೆ ಅಭಿವೃದ್ಧಿ 10 ಲಕ್ಷ ಅನುದಾನದಲ್ಲಿ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.

ಪೆರುವಾಯಿ ಗ್ರಾಮದಲ್ಲಿ1.40 ಕೋ.ರೂಗಳ ಒಟ್ಟು 18 ವಿವಿಧ ಕಾಮಗಾರಿಗಳಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ಹಾಗೂ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಶಾಸಕ ಅಶೋಕ್ ರೈ.

Share News