ವಿಟ್ಲ: ಅಡಿಕೆ ಸೇರಿ 28 ವಾಣಿಜ್ಯ ಬೆಳೆಗಳನ್ನು ಕೃಷಿ ಇಲಾಖೆಯಡಿ ತರುವ ಭಾಗವಾಗಿ ಮನವಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಆಗ ಬೆಳೆಗಾರರಿಗೆ ಸರಕಾರದ ಸೌಲಭ್ಯ ಸಿಗುತ್ತದೆ. ಅಡಿಕೆ ಬೆಳೆ ಕೊಳೆರೋಗದಿಂದ ನಾಶವಾಗಿ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ರೈತರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಟ್ಲದ ಭಗವತಿ ದೇವಸ್ಥಾನದ ಸಭಾಭವನದಲ್ಲಿ ಆತ್ಮ
ಯೋಜನೆ ತಾಂತ್ರಿಕ ಕಾರ್ಯಗಾರ ಕಿಸಾನ್ ಗೋಷ್ಠಿ ಹಾಗೂ ಸೌಲಭ್ಯಆತ್ಮ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಹವಾಮಾನ ಆಧರಿತ ವಿಮೆಗೆ 500ರಿಂದ 600 ಕೋಟಿ ರೂ.ಗಳನ್ನು ಸರಕಾರ ರೈತರಿಗೆ ನೀಡುತ್ತದೆ, ಇದರಲ್ಲಿ ಶೇ.14ರಷ್ಟು ಪಾಲು ಕೇಂದ್ರ ಸರಕಾರದ್ದು ಮತ್ತು ಉಳಿದ ಶೇ.66 ರಷ್ಟು ಪಾಲನ್ನು ರಾಜ್ಯ ಸರಕಾರ ನೀಡುತ್ತದೆ ಎಂದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯೊಟ್ಟು ಮಾತನಾಡಿ, ರೈತರು ಬೆಲೆ ಕುಸಿತ, ಇಳುವರಿ ಕಡಿಮೆ
ಬಗ್ಗೆ ಹೆಚ್ಚು ಚಿಂತಿತರಾಗದೇ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಬೇಕು ಎಂದರು. ರೈತರಿಗೆ ಔಷಧಿ ಸಹಾಯಧನದಲ್ಲಿ ಸಿಗುವ ಔಷಧ ಸಿಂಪಡಣೆ ಯಂತ್ರ, ತುಂತುರು ನೀರಾವರಿ ಸಲಕರಣೆ, ಹುಲ್ಲು ಮತ್ತು ಕಳೆ ತೆಗೆಯುವ ಸಲಕರಣೆ ಮತ್ತಿತರ ಸಲಕರಣೆ ಹಾಗೂ ಗೊಬ್ಬರ ಇತ್ಯಾದಿ ಸೇರಿ 30 ಮಂದಿ ಫಲಾನುಭವಿಗಳಿಗೆ ಒಟ್ಟು 4. 5ಲಕ್ಷ ರೂ.ಗಳಿಗೂ ಅಧಿಕ ಯಂತ್ರಗಳನ್ನು ವಿತರಿಸಲಾಯಿತು.
2021-2024ನೇ ಸಾಲಿನ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಎಲ್ಲ ಹೋಬಳಿಯ ವಿಟ್ಲ ಕನ್ಯಾನ ಗ್ರಾಮದ ಎನ್ ಕೆ.ಸುರೇಶ ಭಟ್ ಕೊಣದೆ ಅವರನ್ನು ಸಮಾನಿಸಲಾಯಿತು ಕೃಷಿಸಖಿಯರಿಗೆ ಗುರುತುಪತ್ರ ನೀಡಲಾಯಿತು.
ವಿಟ್ಲ ಶೋಕಮಾತಾ ಇಗರ್ಜಿಯ ಧರ್ಮಗುರು ಫಾ| ಐವನ್ ಮೈಕೆಲ್ ರಾಡಿಗ್ರೆಸ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಧರಾಜ ಬಲ್ಲಾಳ ಮಾವಂತೂರು, ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ ರಾಜ್ಯ ಪ್ರತಿನಿಧಿ ಪದ್ಮನಾಭಕೈ ಗೋಳ್ತಮಜಲು, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ
ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಸ್ವಾಗತಿಸಿದರು. ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಪ್ರಸ್ತಾವನೆಗೈದರು. ಕೃಷಿ ಇಲಾಖೆ ಅಧಿಕಾರಿ ತಾಂತ್ರಿಕ ನಂದನ್ ಶೆಣೈ ನಿರೂಪಿಸಿದರು. ಇಲಾಖೆಯ ವಿರೂಪಾಕ್ಷಿ, ಹನುಮಂತ ಸಹಕರಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ವಂದಿಸಿದರು.