• Home  
  • ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ Anti Riots gun & Stun Shell ನ್ನು ಉಪಯೋಗಿಸುವ ಬಗ್ಗೆ ಪ್ರಾಯೋಗಿಕ ತರಬೇತಿ.
- DAKSHINA KANNADA - HOME

ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ Anti Riots gun & Stun Shell ನ್ನು ಉಪಯೋಗಿಸುವ ಬಗ್ಗೆ ಪ್ರಾಯೋಗಿಕ ತರಬೇತಿ.

ಮಂಗಳೂರು ಜುಲೈ2 ದಕ್ಷಿಣ ಕನ್ನಡ ಜಿಲ್ಲೆ ಸೇರಿ ಮೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹರ್ದತೆ ಮತ್ತು ಶಾಂತಿ ವಾತವಾರಣವನ್ನು  ಕಾಪಾಡುವ  ದೃಷ್ಟಿಯಿಂದ ಇತ್ತೀಚೆಗೆ ಹೊಸದಾಗಿ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತರಬೇತಿ ನೀಡಲಾಯಿತು.


ಉತ್ತಮ ಕಾರ್ಯಕ್ಷಮತೆಗಾಗಿ ಕೋಮು ಗಲಭೆಗಳ ಸಂಧರ್ಭಗಳಲ್ಲಿ ಉದ್ರಗ್ತ ಜನ ಸಮೂಹವನ್ನು ಚದುರಿಸುವ ಸಲುವಾಗಿ ಉಪಯೋಗಿಸುವ Anti Riots gun & Stun Shell ನ್ನು ಉಪಯೋಗಿಸುವ ಬಗ್ಗೆ ತರಬೇತಿ ನೀಡಲಾಯಿತು. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ತರಬೇತಿ ನೀಡಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. 



ಈ ತರಬೇತಿ ಮತ್ತು ಪ್ರಾತ್ಯಕ್ಷಕೆಯಲ್ಲಿ ವಿಶೇಷ ಕಾರ್ಯಪಡೆ ಘಟಕದ Operational wing  ನ 95 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಅಲ್ಲದೇ ಗುಪ್ತಚರ ವಿಭಾಗದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವ ದ್ವೇಷ ಭಾಷಣ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುವ ಕುರಿತು ಪರಿಣಾಮಕಾರಿಯಾಗಿ ತರಬೇತಿಯನ್ನು ನೀಡಲಾಯಿತು.

*

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678