ಹೊಸದಿಲ್ಲಿ, ಆ.5: ಭಾರತದ ಇತಿಹಾಸದಲ್ಲೇ ಅತೀ ದೀರ್ಘಾವಧಿ ಸೇವೆ ಸಲ್ಲಿಸಿದ ಗೃಹ ಸಚಿವ ಎಂಬ ಹೆಗ್ಗಳಿಕೆಗೆ ಅಮಿತ್ ಶಾ ಪಾತ್ರರಾಗಿದ್ದಾರೆ.

ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಮಂಗಳವಾರಕ್ಕೆ 2,258 ದಿನಗಳು ಸಂದಿವೆ. ವಿಶೇಷ ಎಂದರೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಮಾಡಿದ್ದ ಆ. 5ರಂದೇ ಅವರು ಈ ಸಾಧನೆ ಮಾಡಿದ್ದಾರೆ.
ಅಮಿತ್ ಶಾ 2019ರ ಮೇ 30ರಂದು ಕೇಂದ್ರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿ, 2024 ಜೂನ್ 9ರ ವರೆಗೆ ಅಧಿಕಾರದಲ್ಲಿದ್ದರು. ಬಳಿಕ 2024ರ ಜೂನ್ 10ರಂದು ಮತ್ತೆ ಕೇಂದ್ರ ಗೃಹ ಸಚಿವರಾಗಿ, ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ಅವರು ಕೇಂದ್ರದ ಮೊದಲ ಸಹಕಾರ ಸಚಿವರೂ ಹೌದು. ಮಂಗಳವಾರ ದಿಲ್ಲಿಯಲ್ಲಿ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಅಮಿತ್ ಶಾ ಅವರನ್ನು ಅಭಿನಂದಿಸಿ, ಭಾರತದ ಇತಿಹಾಸದಲ್ಲೇ ಅತೀ ದೀರ್ಘಾವಧಿ ಸೇವೆ ಸಲ್ಲಿಸಿದ ಗೃಹ ಸಚಿವ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಯಾರು, ಎಷ್ಟು ಅವಧಿ?
ಅಮಿತ್ ಶಾ 2,2582 ದಿನಗಳು (6 ವರ್ಷ 68 ದಿನ)
ಎಲ್.ಕೆ. ಆಡ್ವಾಣಿ 2,2562 ದಿನಗಳು(6 ವರ್ಷ 64 ದಿನ)
ಗೋವಿಂದ ವಲ್ಲಭ ಪಂತ್ 2,2472 ದಿನಗಳು (6 2 56 2)