• Home  
  • ಅಂಬೇಡ್ಕರ್ ಭವನಕ್ಕೆ ರೂ. 75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಶಾಸಕರಾದ ಅಶೋಕ್ ರೈ ಸನ್ಮಾನ
- DAKSHINA KANNADA - HOME

ಅಂಬೇಡ್ಕರ್ ಭವನಕ್ಕೆ ರೂ. 75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಶಾಸಕರಾದ ಅಶೋಕ್ ರೈ ಸನ್ಮಾನ

ಬಂಟ್ವಾಳ ವಿಟ್ಲ : ದ.ಕ. ಜಿಲ್ಲಾ. ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸರ್ವ ಕಾರ್ಯಕರ್ತರ ಪರಿಶ್ರಮದ ಮೂಲಕ ವಿಟ್ಲದಲ್ಲಿ ಮಂಜುರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ರೂ. 75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಅಶೋಕ್ ರೈ ಯವರನ್ನು ವಿಟ್ಲದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಘಟನೆ ಯ ಸುಮಾರು 40 ಮಂದಿ ಕಾರ್ಯಕರ್ತರು ಹೂಗುಚ್ಛ ನೀಡಿ ಶಾಲು ಹೊದಿಸಿ ಭಾರತದ ಸಂವಿಧಾನ ಪುಸ್ತಕ ನೀಡಿ ಗೌರವಿಸಲಾಯಿತು. ಮತ್ತು ಇನ್ನೂ ಹೆಚ್ಚಿನ […]

Share News

ಬಂಟ್ವಾಳ ವಿಟ್ಲ : ದ.ಕ. ಜಿಲ್ಲಾ. ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸರ್ವ ಕಾರ್ಯಕರ್ತರ ಪರಿಶ್ರಮದ ಮೂಲಕ ವಿಟ್ಲದಲ್ಲಿ ಮಂಜುರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ರೂ. 75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಅಶೋಕ್ ರೈ ಯವರನ್ನು ವಿಟ್ಲದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಘಟನೆ ಯ ಸುಮಾರು 40 ಮಂದಿ ಕಾರ್ಯಕರ್ತರು ಹೂಗುಚ್ಛ ನೀಡಿ ಶಾಲು ಹೊದಿಸಿ ಭಾರತದ ಸಂವಿಧಾನ ಪುಸ್ತಕ ನೀಡಿ ಗೌರವಿಸಲಾಯಿತು.

ಮತ್ತು ಇನ್ನೂ ಹೆಚ್ಚಿನ ಅನುದಾನ ತರಿಸುವಂತೆ ಕೂಡಲೆ ಕಾಮಗಾರಿ ಪ್ರಾರಂಭಿಸುವಂತೆ ಮನವಿ ನೀಡಲಾಯಿತು. ಮಾನ್ಯ ಶಾಸಕರು ಕೂಡ ಸಂಘಟನೆಯ ಸ್ಥಾಪಕಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡುರವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಒಂದು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳಿಗೂ ಸ್ಥಾಪಕಧ್ಯಕ್ಷರು ಭೀಮ ನಮನಗಳನ್ನು ಸಲ್ಲಿಸುವುದಾಗಿದೆ. ನಮ್ಮ ಒಗ್ಗಟ್ಟು ಹಾಗೂ ಪ್ರಯತ್ನ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುವುದಾಗಿದೆ.

Share News