• Home  
  • ಒಡಿಶಾ ರಾಜ್ಯದಲ್ಲಿ ನಡೆದ ಕ್ರೈಸ್ತ ಧರ್ಮಗುರುಗಳ ಹಾಗೂ ಸನ್ಯಾಸಿನಿಯರ ಮೇಲಿನ ಹಿಂಸಾತ್ಮಕ ದಾಳಿಗೆ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಖಂಡನೆ
- DAKSHINA KANNADA - HOME

ಒಡಿಶಾ ರಾಜ್ಯದಲ್ಲಿ ನಡೆದ ಕ್ರೈಸ್ತ ಧರ್ಮಗುರುಗಳ ಹಾಗೂ ಸನ್ಯಾಸಿನಿಯರ ಮೇಲಿನ ಹಿಂಸಾತ್ಮಕ ದಾಳಿಗೆ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಖಂಡನೆ

ಮಂಗಳೂರು ಆಗಸ್ಟ್ 07: ಜಲೇಶ್ವರ (ಒಡಿಶಾ) ಧರ್ಮಕ್ಷೇತ್ರದ ವ್ಯಾಪ್ತಿಯ ಗಂಗಾಧರ ಮಿಷನ್ ಕೇಂದ್ರದಲ್ಲಿ ನಿನ್ನೆ ಆಗಸ್ಟ್ 6ರಂದು ಬುಧವಾರ ನಡೆದ ಕ್ರೂರ, ಕಲ್ಪಿತ ಹಾಗೂ ಪೂರ್ವನಿಯೋಜಿತ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಹೀನಕೃತ್ಯವನ್ನು ಸುಮಾರು 70ಕ್ಕೂ ಹೆಚ್ಚು ಬಜರಂಗದಳದ ಕಾರ್ಯಕರ್ತರು ಕೈಗೊಂಡಿದ್ದು, ಇಬ್ಬರು ಕಥೊಲಿಕ್ ಧರ್ಮಗುರುಗಳು, ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರ ಒಬ್ಬ ಹಿಂಬಾಲಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹೇಳಿದರು.


ದುಃಖಿತ ಕುಟುಂಬಗಳ ಮರಣ ವಾರ್ಷಿಕ ಪ್ರಾರ್ಥನೆಗಾಗಿ ಹೋಗಿದ್ದ ಧಾರ್ಮಿಕ ಸೇವಕರನ್ನು ಬಲವಂತದ ಧರ್ಮಾಂತರ ಎಂಬ ಸುಳ್ಳು ಆರೋಪಗಳ ಆಧಾರದ ಮೇಲೆ ದೌರ್ಜನ್ಯಗೊಳಿಸುವುದು ನಮ್ಮ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧವಾಗಿದೆ. ಈ ಘಟನೆ ಮಾನವೀಯತೆ, ಸಹಿಷ್ಣುತೆ ಮತ್ತು ನ್ಯಾಯದ ಮೌಲ್ಯಗಳನ್ನು ಅಪಮಾನಗೊಳಿಸಿದೆ. ಇಂತಹ ಹಿಂಸಾತ್ಮಕ ಹಾಗೂ ದ್ವೇಷದ ಮೂಲಕ ದಾಳಿಗಳು ದೇಶದ ಧಾರ್ಮಿಕ ಸಹಬಾಳ್ವೆ ಹಾಗೂ ಭದ್ರತೆಗೆ ಅಪಾಯವಾಯಿತಾಗಿದೆ. ಪ್ರೀತಿಯ ತತ್ವಗಳಲ್ಲಿ ನಂಬಿಕೆ ಇಡುವ ಪ್ರಜೆಗಳಾಗಿ ನಾವು ಈ ದಾಳಿಯನ್ನು ಖಂಡಿಸುತ್ತೇವೆ ಹಾಗೂ ನ್ಯಾಯದ ಬಲವನ್ನು ಬೆಂಬಲಿಸುತ್ತೇನೆ ಎಂದವರು ನುಡಿದರು.

ಧರ್ಮಾಧಾರಿತ ಶಾಂತಿಯುತ ಸಮಾಜಕ್ಕಾಗಿ ಸದಾ ಸಿದ್ದ – ಆಲ್ವಿನ್ ಡಿಸೋಜ
ಅದರೊಂದಿಗೆ ನಾವು ಒಡಿಶಾ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತವನ್ನು ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಲು, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲು, ಧಾರ್ಮಿಕ ಸೇವಕರ ಸುರಕ್ಷತೆ ಮತ್ತು ಗೌರವವನ್ನು ಕಾಯ್ದಿರಿಸಲು, ಬಲವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ. ಈ ಹೀನ ಕೃತ್ಯದಲ್ಲಿ ಬಲಿಯಾಗಿರುವ ಎಲ್ಲಾ ಧಾರ್ಮಿಕ ಸೇವಕರಿಗೆ, ಅವರ ಕುಟುಂಬಗಳಿಗೆ ಮತ್ತು ಬಾಲಾಸೋರ್‌ ಧರ್ಮಕ್ಷೇತ್ರಕ್ಕೆ ನಾವು ನಮ್ಮ ಸಾಂತ್ವನವನ್ನು ಹಾಗೂ ಹೃತೂರ್ವಕ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅವರಿಗೆ ಶಾಂತಿ, ಧೈರ್ಯ ಹಾಗೂ ನ್ಯಾಯದ ವಿಜಯ ಸಿಗಲೆಂದು ದೇವರಲ್ಲಿ ಬೇಡುತ್ತೇನೆ. ಧರ್ಮಾಧಾರಿತ ಶಾಂತಿಯುತ ಸಮಾಜಕ್ಕಾಗಿ ನಾವು ಬದ್ಧರಾಗಿದ್ದೇವೆ ಎಂದು ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678