• Home  
  • *ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ*
- DAKSHINA KANNADA - HOME

*ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ*

ಮಂಗಳೂರು: ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ. ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತವಾದ ಕಾರ್ಯವನ್ನು ನಾವು ಮಾಡಬೇಕಾಗಿದೆ. ನಮ್ಮವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ, ಎಲ್ಲಿದ್ದಾರೆ ಎಂಬ ವಿಷಯ, ಮಾಹಿತಿ ನಮ್ಮಲಿಲ್ಲ. ಸಹಸ್ರಾರು ಸಮಾಜ ಬಾಂಧವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸಿ ಅವರಿಗೆ ಸಹಾಯ ಮಾಡುವ ಹಾಗೂ ಬಂಟ ಸಮಾಜವನ್ನು ಒಗ್ಗೂಡಿಸಿ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ತಿಳಿಸಿದರು.

ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಗೀತಾ ಎಸ್ ಎಮ್ ಶೆಟ್ಟಿ ಸಭಾಭವನದಲ್ಲಿ ನಡೆದ 104 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಂಧವ್ಯ ಎಂಬ ನಾಮಾಂಕಿತದೊಂದಿಗೆ ವಿಶ್ವ ವ್ಯಾಪಿಯಾಗಿ ನೆಲೆಸಿರುವ ಬಂಟರ, ನಾಡವರ ಸಾಮಾಜಿಕ ಆರ್ಥಿಕ, ಶೈಕ್ಷಣಿಕ, ಔಧ್ಯೋಗಿಕ ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಒಟ್ಟು ಜೀವನದ ವ್ಯವಸ್ಥೆ ಹಾಗೂ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ ವಿಶ್ವಬಂಟರ ಮಾಹಿತಿ ಕೋಶವನ್ನು ತಯಾರು ಮಾಡುವ ಒಂದು ಅನುಕರಣೀಯ, ಶ್ರೇಷ್ಠ ಕೆಲಸವನ್ನು ಮಾಡೋಣ ಎಂದರು.


ಸಭೆಯಲ್ಲಿ 2023-24 ನೇ ಸಾಲಿನ ವರದಿಯನ್ನು ಸಂಘದ ಪ್ರಧಾನ ಲಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು.
2023-24 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ ಸಭೆಯಲ್ಲಿ ಮಂಡಿಸಿದರು.

ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾಷಿಕ ವರದಿಗಳನ್ನು ಉಮೇಶ್ ರೈ ಶ್ಯಾಲಿನಿ ಶೆಟ್ಟಿ, ಯಶೋಧ ಶೆಟ್ಟಿ, ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ಭುಜಂಗ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ವಿಜಯ ಶೆಟ್ಟಿ ಕಡಂಬ, ಜಯರಾಮ ಭಂಡಾರಿ, ಸುಧೀರ್ ಕುಮಾರ್ ರೈ ಮಂಡಿಸಿದರು.
2024-25 ನೇ ಸಾಲಿಗೆ ಲೆಕ್ಕಪರಿಶೋಧಕರನ್ನಾಗಿ………ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678