canaratvnews

*ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಗಣರಾಜ್ಯೋತ್ಸವದಲ್ಲಿ ‘ಸಂತ ಆಗ್ನಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯರೂಪಕ ಪ್ರದರ್ಶನ*

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಗೌರವ ಸ್ವೀಕರಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ದಿನೇಶ್ ಗುಂಡೂರಾವ್ ರವರು ಮಾತನಾಡಿ, ಉನ್ನತ ಪ್ರಜಾಪ್ರಭುತ್ವದ ಆಶಯ ಹೊಂದಿರುವ ಸಂವಿಧಾನ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಏಕತೆಯ ಆಧಾರದ ಮೇಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಹಾಗೂ ನೃತ್ಯದಂತಹ ಸಾಂಸ್ಕೃತಿಕ ಕಾಠ್ಯಕ್ರಮ ನಡೆದವು.


ವಿಶೇಷವಾಗಿ ಸಂತ ಆಗ್ನಸ್ ಪದವಿ ಪೂರ್ವ ಕಾಲೇಜಿನ 50ರಷ್ಟು ವಿದ್ಯಾರ್ಥಿನಿಯರನ್ನೊಳಗೊಂಡ ನೃತ್ಯರೂಪಕ ಆಮೋಘವಾಗಿತ್ತು. ಕಾಲೇಜಿನ ಸಾಂಸ್ಕೃತಿಕ ಕಾವ್ಯದರ್ಶಿ ಕು. ಸೋನಾಲೆಯವರ ಮುಂದಾಳತ್ವದಲ್ಲಿ ರಾಷ್ಟ್ರ ಚಿಹ್ನೆಗಳಾದ ಕಮಲ, ನವಿಲು, ಹುಲಿ, ನಿತಾರ್, ಆಲದ ಮರ ಹಾಗೂ ಹಾಕಿಯನ್ನು ಸಾಂಕೇತಿಕವಾಗಿರಿಸಿಕೊಂಡು, ಅದ್ಭುತ ನೃತ್ಯರೂಪಕ ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಾತ್ರವಲ್ಲ ನಮ್ಮ ರಾಷ್ಟ್ರ ನಮ್ಮ ಹೆಮ್ಮೆ


ಕಾಠ್ಯಕ್ರಮದ ಘನಸ್ಥಾನದಲ್ಲಿ ಸಂಸದರು ಲೋಕಸಭೆ ದ.ಕ ಜಿಲ್ಲೆ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಂ.ಎಲ್.ಸಿ ಶ್ರೀ ಐವನ್ ಡಿ ಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಕಮೀಷನರ್ ಶ್ರೀ ಸುಧೀರ್ ಕುಮಾರ್ ರೆಡ್ಡಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Share News
Exit mobile version